Namma Metro | ಯಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಗಸ್ಟ್ ಒಳಗೆ ಬರಲಿವೆ ಇನ್ನೂ 2 ಹೊಸ ರೈಲುಗಳು!

ಹಂಚಿಕೊಳ್ಳಿ

ಬೆಂಗಳೂರು: ಸಿಲಿಕಾನ್ ಸಿಟಿಯ ಬಿಎಂಆರ್‌ಸಿಎಲ್ (BMRCL) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಜುಲೈ-ಆಗಸ್ಟ್ ತಿಂಗಳಿನಲ್ಲಿ ಮತ್ತೊಂದು ಪ್ರಮುಖ ಕೊಡುಗೆ ನೀಡಲು ಸಜ್ಜಾಗಿದೆ. ಆರ್‌ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ (RV Road to Bommasandra) ಬಹುನಿರೀಕ್ಷಿತ ‘ಯಲ್ಲೋ ಲೈನ್’ ಮಾರ್ಗದಲ್ಲಿ ಪ್ರಯಾಣಿಸುವ ಜನರಿಗೆ ಶೀಘ್ರದಲ್ಲೇ ಮೆಟ್ರೋ ಕಾಯುವ ಅವಧಿ ಮತ್ತಷ್ಟು ಕಡಿತಗೊಳ್ಳಲಿದೆ.

ಆಗಸ್ಟ್ 20ರ ಒಳಗಾಗಿ ಈ ಯಲ್ಲೋ ಮಾರ್ಗಕ್ಕೆ ಹೆಚ್ಚುವರಿಯಾಗಿ ಇನ್ನೂ ಎರಡು ಹೊಸ ಮೆಟ್ರೋ ರೈಲುಗಳು ಸೇರ್ಪಡೆಯಾಗಲಿವೆ. ಇದರೊಂದಿಗೆ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವ ಒಟ್ಟು ರೈಲುಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಇದು ಐಟಿ ಹಜಾರ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ನಿತ್ಯ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲಿದೆ.

 ಪ್ರಸ್ತುತ ಯಲ್ಲೋ ಲೈನ್ ಮಾರ್ಗಕ್ಕಾಗಿ ಒಟ್ಟು 13 ಚಾಲಕರಹಿತ (Driverless Trains) ಮೆಟ್ರೋ ರೈಲುಗಳನ್ನು ನಿಯೋಜಿಸಲಾಗಿದ್ದು, ಈ ಪೈಕಿ 10 ರೈಲುಗಳು ಸಕ್ರಿಯವಾಗಿ ಹಳಿಗಳ ಮೇಲೆ ಸಂಚರಿಸುತ್ತಿವೆ. ಸದ್ಯಕ್ಕೆ ಪ್ರಯಾಣಿಕರು ಪೀಕ್ ಅವರ್‌ನಲ್ಲಿ (Peak Hours) ಪ್ರತಿ 7 ನಿಮಿಷಕ್ಕೊಮ್ಮೆ ಮತ್ತು ನಾನ್ ಪೀಕ್ ಅವರ್‌ನಲ್ಲಿ (Non-Peak Hours) ಪ್ರತಿ 10 ನಿಮಿಷಕ್ಕೊಮ್ಮೆ ಮೆಟ್ರೋ ರೈಲಿಗಾಗಿ ಕಾಯಬೇಕಾಗಿದೆ.

ಆದರೆ, ಆಗಸ್ಟ್‌ನಲ್ಲಿ ಈ ಎರಡು ಹೆಚ್ಚುವರಿ ರೈಲುಗಳ ಓಡಾಟ ಆರಂಭವಾದರೆ, ರೈಲುಗಳ ಸಂಚಾರದ ಆವರ್ತನ (Frequency) ಹೆಚ್ಚಾಗಲಿದ್ದು, ಪ್ರಯಾಣಿಕರ ಕಾಯುವ ಸಮಯ ಗಣನೀಯವಾಗಿ ಇಳಿಕೆಯಾಗಲಿದೆ.

Leave a Reply

Your email address will not be published. Required fields are marked *

Advertisement


This will close in 3 seconds