ಪ್ರಧಾನಿ ನರೇಂದ್ರ ಮೋದಿ ಅವರ ಮುಡಿಗೇರುತ್ತಿರುವ ಜಾಗತಿಕ ಪ್ರಶಸ್ತಿಗಳ ಸರಮಾಲೆಗೆ ಇದೀಗ ಮತ್ತೊಂದು ಅತ್ಯುನ್ನತ ಗೌರವ ಸೇರ್ಪಡೆಯಾಗಿದೆ. ಸ್ಲೋವಾಕಿಯಾ ಗಣರಾಜ್ಯವು ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ (1st Class)’ ಅನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಿದೆ.
ಸ್ಲೋವಾಕಿಯಾದ ಅಧ್ಯಕ್ಷರಾದ ಪೀಟರ್ ಪೆಲ್ಲೆಗ್ರಿನಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಪ್ರದಾನ ಮಾಡಿದರು. ವಿಶೇಷವೆಂದರೆ, ಇದು ವಿದೇಶವೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುತ್ತಿರುವ 33ನೇ ಜಾಗತಿಕ ಗೌರವವಾಗಿದೆ.

‘ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ (1st Class)’ ಪ್ರಶಸ್ತಿಯು ಸ್ಲೋವಾಕಿಯಾ ಗಣರಾಜ್ಯವು ನೀಡುವ ಅತ್ಯುನ್ನತ ರಾಜ್ಯಮಟ್ಟದ ಪುರಸ್ಕಾರವಾಗಿದೆ.
ಸ್ಲೋವಾಕಿಯಾ ದೇಶದೊಂದಿಗೆ ಸ್ನೇಹಪೂರ್ವಕ ಸಂಬಂಧವನ್ನು ಬೆಳೆಸುವಲ್ಲಿ ಅಸಾಧಾರಣ ಕೊಡುಗೆ ನೀಡಿದ, ಹಾಗೂ ಆ ದೇಶದ ವಿದೇಶಾಂಗ ನೀತಿಯ ಹಿತಾಸಕ್ತಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಥಾನಮಾನಕ್ಕೆ ಅತ್ಯುತ್ತಮ ಬೆಂಬಲ ನೀಡಿದ ವಿದೇಶಿ ಗಣ್ಯರನ್ನು ಗುರುತಿಸಿ ಅಲ್ಲಿನ ಅಧ್ಯಕ್ಷರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.


Leave a Reply