ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಖರೀದಿಗೆ ಕೇಂದ್ರದಿಂದ ದಿನದ ಮಿತಿ ನಿಗದಿ!

ಹಂಚಿಕೊಳ್ಳಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ (Middle East) ಭುಗಿಲೆದ್ದಿರುವ ಸರಣಿ ಯುದ್ಧದ ಭೀಕರ ಪರಿಣಾಮ ದೇಶದ ಇಂಧನ ವಲಯದ ಮೇಲೆ ಬೀರಿದ್ದು, ಭಾರತದಾದ್ಯಂತ ತೈಲ ಪೂರೈಕೆಯಲ್ಲಿ ಭಾರಿ ಕೊರತೆ ಎದುರಾಗಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರ್ಕಾರವು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಕಠಿಣ ನಿಯಮ ಹಾಗೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ನಿಯಮವು ಇಂದಿನಿಂದಲೇ ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರದ ನೂತನ ಆದೇಶದ ಪ್ರಕಾರ, ಇನ್ಮುಂದೆ ಗ್ರಾಹಕರು ನಿತ್ಯ ಗರಿಷ್ಠ 200 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮಾತ್ರ ಖರೀದಿ ಮಾಡಲು ಮಿತಿ (Capping) ವಿಧಿಸಲಾಗಿದೆ. ವಿಶೇಷವಾಗಿ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಕೃಷಿ ಉದ್ಯಮಗಳು ಸೇರಿದಂತೆ ಇನ್ನಿತರ ದೊಡ್ಡ ಮಟ್ಟದ ಸಗಟು (Bulk) ಇಂಧನ ಖರೀದಿದಾರರಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದ್ದು, ಸಗಡು ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ತೈಲ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ರೇಷನಿಂಗ್ ನೀತಿಯು ಮುಂದಿನ 30 ದಿನಗಳವರೆಗೆ ಚಾಲ್ತಿಯಲ್ಲಿರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

Advertisement


This will close in 3 seconds