ಶಿರಸಿ: ನಗರದ ದುಂಡಶಿನಗರ ರಸ್ತೆಯ ಮುಸ್ಲಿಂಗಲ್ಲಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಕೊರಳಲ್ಲಿದ್ದ ಬಂಗಾರದ ಹವಳದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ತಾಲೂಕಿನ ಉಂಚಳ್ಳಿ ಗ್ರಾಮದ ತಾರಾಮತಿ ಈಶ್ವರ ನಾಯಕ (66) ಅವರು ಗುರುವಾರ ಬೆಳಿಗ್ಗೆ ಸುಮಾರು 8.20ರ ವೇಳೆಗೆ ದುಂಡಶಿನಗರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಬೈಕ್ನಲ್ಲಿ ಬಂದ ಇಬ್ಬರ ಪೈಕಿ ಒಬ್ಬಾತ, ಅವರ ಕೊರಳಲ್ಲಿದ್ದ ಸರವನ್ನು ಎಳೆದು ಕಿತ್ತುಕೊಂಡಿದ್ದಾನೆ. ಬಳಿಕ ಇಬ್ಬರೂ ಬೈಕ್ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕಿತ್ತುಕೊಂಡ ಸರದ ತುಂಡು ಸುಮಾರು 2.5 ಗ್ರಾಂ ತೂಕದ್ದಾಗಿದ್ದು, ಅದರ ಮೌಲ್ಯ ಅಂದಾಜು ₹35 ಸಾವಿರ ಎಂದು ತಿಳಿದುಬಂದಿದೆ. ಆರೋಪಿಗಳನ್ನು ಎದುರಿಗೆ ಕಂಡರೆ ಗುರುತಿಸುವುದಾಗಿ ತಾರಾಮತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.















Leave a Reply