ಬೆಂಗಳೂರು: ರಾಜಧಾನಿಯ ಬಸವೇಶ್ವರ ನಗರದಲ್ಲಿರುವ ಲೇಡಿಸ್ ಪಿಜಿಯೊಂದರ (Ladies PG) ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು, ಇದನ್ನು ಪ್ರಶ್ನಿಸಿದ ಯುವತಿಯರನ್ನು ಮಧ್ಯರಾತ್ರಿಯೇ ಪಿಜಿಯಿಂದ ಹೊರಹಾಕಲು ಮಾಲೀಕರು ಯತ್ನಿಸಿರುವ ಗಂಭೀರ ಘಟನೆ ನಡೆದಿದೆ. ಪಿಜಿಯ ಕಳಪೆ ನಿರ್ವಹಣೆ ಹಾಗೂ ಅಶುಚಿತ್ವದ ಊಟದ ಬಗ್ಗೆ ಯುವತಿಯರು ಆಕ್ಷೇಪ ವ್ಯಕ್ತಪಡಿಸಿದಾಗ, ತಕ್ಷಣವೇ ಪಿಜಿ ಖಾಲಿ ಮಾಡುವಂತೆ ಮಾಲೀಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ನಿವಾಸಿ ಯುವತಿಯರು ತಡರಾತ್ರಿಯೇ ಪಿಜಿಯಿಂದ ಹೊರಗೆ ಬಂದು, ರಸ್ತೆ ಬದಿಯಲ್ಲೇ ನಿಂತು ಮಾಲೀಕರ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಸಾರ್ವಜನಿಕರು ಹಾಗೂ ಪೊಲೀಸರು ಭೇಟಿ ನೀಡುವ ಸಾಧ್ಯತೆ ಇದ್ದು, ಮೂಲಭೂತ ಸೌಕರ್ಯ ಹಾಗೂ ಶುಚಿತ್ವ ಇಲ್ಲದೆ ದಬ್ಬಾಳಿಕೆ ನಡೆಸುತ್ತಿರುವ ಪಿಜಿ ಮಾಲೀಕನ ವಿರುದ್ಧ ಯುವತಿಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Leave a Reply