ಹೊಸ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM DK Shivakumar) ಅವರು ಇಂದು ಬೆಳಿಗ್ಗೆ 10:45ಕ್ಕೆ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ವಿಷಯಗಳ ಕುರಿತು ಚರ್ಚಿಸಿದ್ದ ಸಿಎಂ ಡಿಕೆಶಿ, ಇಂದು ರಾಷ್ಟ್ರಪತಿಗಳ ಭೇಟಿಯ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೆಹಲಿಯ ವಿವಿಐಪಿ (VVIP) ಗಣ್ಯರನ್ನು ಭೇಟಿಯಾಗುತ್ತಿರುವ ಡಿಕೆಶಿ ಅವರ ಈ ಪ್ರವಾಸ ಆಡಳಿತಾತ್ಮಕವಾಗಿ ಭಾರಿ ಮಹತ್ವ ಪಡೆದಿದೆ. ಕೇಂದ್ರದ ನಾಯಕರನ್ನು ಭೇಟಿ ಮಾಡುವ ಮೂಲಕ ರಾಜ್ಯದ ಪ್ರಮುಖ ಅಭಿವೃದ್ಧಿ ಯೋಜನೆಗಳು ಹಾಗೂ ಅನುದಾನಗಳ ಬಿಡುಗಡೆಗೆ ಸಿಎಂ ಶಿವಕುಮಾರ್ ವೇಗ ನೀಡಲಿದ್ದಾರೆ ಎನ್ನಲಾಗಿದೆ.

Leave a Reply