ಕುಡಿದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಕೊಂ*ದಿದ್ದ ಮಗ ಹಾಗೂ ಅಳಿಯ Arrest!

ಹಂಚಿಕೊಳ್ಳಿ

ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಹಾಗೂ ಅಳಿಯ ಸೇರಿಕೊಂಡು ಬರ್ಬರವಾಗಿ ಕೊ*ಲೆ ಮಾಡಿದ ಭೀಕರ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಮೃ*ತ ರಫೀಕ್ (48) ಎಂಬುವವರ ಮಗ ಸೈಯದ್ ಶಾರುಕ್ ಹಾಗೂ ಅಳಿಯ ಶಹ್ನಿಶಾ ಎಂಬಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ಬಳಿಕ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಕೊ*ಲೆಗೆ ಕಾರಣವೇನು?

ಮೂಲತಃ ತಮಿಳುನಾಡಿನವರಾದ ಆರೋಪಿಗಳಾದ ಸೈಯದ್ ಶಾರುಕ್ ಹಾಗೂ ಶಹಿನ್‌ಶಾ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನೆಲೆಸಿದ್ದರು. ಶಹಿನ್‌ಶಾ ಬೆಳಗಿನ ಜಾವ ಶಾಲಾ ಬಸ್ ಹಾಗೂ ಸಂಜೆ ಆಟೋ ಓಡಿಸುತ್ತಿದ್ದರೆ, ಮಗ ಶಾರುಕ್ ಬೈಕ್ ಟ್ಯಾಕ್ಸಿ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಮೃ*ತ ರಫೀಕ್ ತೀವ್ರ ಕುಡಿತದ ದಾಸನಾಗಿದ್ದು, ಆಗಾಗ್ಗೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದ.

ಅಂತೆಯೇ ಕಳೆದ ಜುಲೈ 4ರಂದು ಕುಡಿದು ಬಂದಿದ್ದ ರಫೀಕ್, ರೂಮ್‌ನಲ್ಲಿ ತೀವ್ರ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ, ಮಗ ಸೈಯದ್ ಶಾರುಕ್ ಹಾಗೂ ಅಳಿಯ ಶಹಿನ್‌ಶಾ ಸೇರಿ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಶ*ವ ವಿಲೇವಾರಿ ಮಾಡಿದ್ದೇಗೆ?

ಹಲ್ಲೆಯ ಬಳಿಕ ಪ್ರಜ್ಞೆ ತಪ್ಪಿದ್ದ ರಫೀಕ್‌ನನ್ನು ಶಹಿನ್‌ಶಾನ ಆಟೋದಲ್ಲಿಯೇ ಕೂರಿಸಿಕೊಂಡು ಆರೋಪಿಗಳು ಬೇಗೂರಿನ ಕಡೆಗೆ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದು, ಬಳಿಕ ಸಿಂಗಸಂದ್ರ ಕೆರೆ ಬಳಿಯಿರುವ ಬೇಗೂರಿನ ವಿಟ್ಲಸಂದ್ರ ಗ್ರಾಮದ ನೀಲಿಗಿರಿ ತೋಪಿನಲ್ಲಿ ಶ*ವವನ್ನು ಬಿಸಾಡಿ ಪರಾರಿಯಾಗಿದ್ದರು.

ನೀಲಿಗಿರಿ ತೋಪಿನಲ್ಲಿ ಅಪರಿಚಿತ ಶ*ವ ಬಿದ್ದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ತೀವ್ರ ತನಿಖೆ ನಡೆಸಿ ಕೊನೆಗೂ ಕೊ*ಲೆಗಡುಕರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds