
ಯಲ್ಲಾಪುರ : ವಾಗಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಗುರುವಾರ ಸಂಘದ ಅಧ್ಯಕ್ಷರಾದ ಶ್ರೀ ಪ್ರಸನ್ನ ಗಾಂವ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳು ಹಾಗೂ ಸಂಘದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಸಂಘವು ₹78,194 ನಿವ್ವಳ ಲಾಭ ಗಳಿಸಿದೆ. ಸದಸ್ಯರ ನಿರಂತರ ಪರಿಶ್ರಮ ದ ಕಾರಣ ಸಂಘ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಿದೆ ಎಂದು ಅಧ್ಯಕ್ಷರಾದ ಪ್ರಸನ್ನ ಗಾಂವ್ಕರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಆನಂದ್ ಲಕ್ಷ್ಮೀನಾರಾಯಣ ಹೆಬ್ಬಾರ್, ನಿರ್ದೇಶಕರಾದ ಶಿವರಾಮ ಗಾಂವ್ಕರ್ ವಾಗಳ್ಳಿ, ನಾರಾಯಣ ಗಾಂವ್ಕರ್ ವಾಗಳ್ಳಿ, ಗಣಪತಿ ಗಾಂವ್ಕರ್ ಕಾನೂರು, ವೆಂಕಟರಮಣ ಗಾಂವ್ಕರ್ ಕಾನೂರು ಹಾಗೂ ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ, ಮಲವಳ್ಳಿ ಸಂಘದ ಅಧ್ಯಕ್ಷರಾದ ಸುಬ್ಬಣ್ಣ ಬೋಳ್ಮನೆ , ಮುಖ್ಯ ಕಾರ್ಯನಿರ್ವಾಹಕ ಗಣಪತಿ ಗಾಂವ್ಕರ್ ಅಂಬ್ಡೆಪಾಲ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಅಭಿವೃದ್ಧಿ, ಹಾಲು ಉತ್ಪಾದಕರ ಹಿತಾಸಕ್ತಿ ಹಾಗೂ ಮುಂದಿನ ಸಾಲಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಿತು. ಲಾಭಾಂಶದಲ್ಲಿ ಸದಸ್ಯರಿಗೆ ಹಾಲು ಸಂಗ್ರಹಕ್ಕೆ ಪಾತ್ರೆಗಳನ್ನು ನೀಡಲಾಯಿತು.















Leave a Reply