
ಯಲ್ಲಾಪುರ: ಪಟ್ಟಣದ ಮುಂಡಗೋಡ ರಸ್ತೆಯ ಸಹ್ಯಾದ್ರಿ ಕೋ ಆಪರೇಟಿವ್ ಸೊಸೈಟಿಯ ಹಿಂಭಾಗದ ಮುಕ್ತ ಜಾಗದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಯಲ್ಲಾಪುರ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 5 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ,ಓರ್ವ ಪರಾರಿಯಾಗಿದ್ದು, ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ದಶರಥ ಮಾಚಕನವರ (41), ಗಣೇಶ ಹನುಮಂತ ಕಟ್ಟಿಮನಿ (40), ರಾಜೇಶ ಮಾಣಿಕೃ ಮೊದಲಿಯರ (37), ಮಂಜುನಾಥ ಆನಂತ ಬೋವಿವಡ್ಡರ (39), ಜಾನ್ಸನ್ ಚಿನ್ನಪ್ಪ (38) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಯಲ್ಲಾಪುರ ಪಟ್ಟಣದ ನಿವಾಸಿಗಳಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ…
ಸಹ್ಯಾದ್ರಿ ಸೊಸೈಟಿಯ ಹಿಂಭಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳದಲ್ಲಿ ಗುಂಪಾಗಿ ಕುಳಿತು ಸಾರ್ವಜನಿಕ ಇಸ್ಪೀಟ್ ಆಟವಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಜಂಟಿಯಾಗಿ ಈ ಜುಗಾರಿ ಅಡ್ಡೆಯ ಮೇಲೆ ಹಠಾತ್ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಜುಗಾರಿ ಆಟಕ್ಕೆ ಬಳಸುತ್ತಿದ್ದ ₹4,050 ನಗದು ಹಣ, 52 ಇಸ್ಪೀಟ್ ಎಲೆಗಳು ಹಾಗೂ ಆಟಕ್ಕೆ ಬಳಸಿದ್ದ ಒಂದು ಪ್ಲಾಸ್ಟಿಕ್ ಚಾಪೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ (KP Act) ಕಲಂ 87 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಎ.ಎಸ್.ಐ ಶ್ರೀ ಅಣ್ಣಪ್ಪ ಕೊಪ್ಪದ ಅವರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.















Leave a Reply