ಗಣೇಶನ ದರ್ಶನಕ್ಕೆ ಹೋದ ಶಾಸಕ: ಶಾಶ್ವತ ಪರಿಹಾರದ ಭರವಸೆ!!!!!

ಹಂಚಿಕೊಳ್ಳಿ

ಯಲ್ಲಾಪುರದ ಉದ್ಯಮ ನಗರದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ವೀಕ್ಷಣೆಗೆ ಹೋಗಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ಆ ಭಾಗದ ಸಮಸ್ಯೆಗಳ ಬಗ್ಗೆ ಸ್ಥಳೀಯರಲ್ಲಿ ಚರ್ಚಿಸಿದ್ದಾರೆ. ಜೊತೆಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ.

ಯಲ್ಲಾಪುರದ ಉದ್ಯಮ ನಗರದಲ್ಲಿ ಮೂರು ದಶಕಗಳಿಂದ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದೆ. ಉದ್ಯಮ ನಗರದ ಯುವಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ಇಲ್ಲಿ ಗಣೇಶ ಉತ್ಸವ ನಡೆಸುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಪ್ರತಿ ವರ್ಷದ ಹಾಗೇ ಈ ವರ್ಷವೂ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪೂಜೆ, ಮಹಾಪೂಜೆ, ಗಣಹೋಮ, ರಸಮಂಜರಿ ಸೇರಿ ಅನೇಕ ಬಗೆಯ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಅನೇಕ ಭಕ್ತರು ಈ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದಾರೆ. ಇಲ್ಲಿ 9 ದಿನಗಳ ಕಾಲ ಉದ್ಯಮನಗರದಲ್ಲಿ ಗಣಪತಿ ಕೂರಿಸಲಾಗುತ್ತದೆ. ಗಣೇಶ ಮೂರ್ತಿ ಕೂರಿಸಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ಆಕರ್ಷಕ ದೀಪಾಲಂಕಾರವನ್ನು ಮಾಡಲಾಗಿದೆ. ಜೊತೆಗೆ ಗಣೇಶ ಉತ್ಸವ ಸಮಿತಿ ಸದಸ್ಯರೇ ಇಲ್ಲಿ ಗುಹೆ ಆಕಾರದ ಮಂಟಪ ರಚಿಸಿದ್ದಾರೆ. ಆ ಮಂಟಪ ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಪರಿಸರಕ್ಕೆ ಹಾನಿ ಆಗದ ಹಾಗೇ ಮಣ್ಣಿನ ಗಣಪತಿಯ ಮೂರ್ತಿ ರಚಿಸಿ ಪೂಜಿಸಲಾಗುತ್ತಿದೆ. ದೇವಿ ದೇವಸ್ಥಾನ ಬಳಿಯ ಪ್ರಸಾದ ಗುನಗಾ ಅವರು ಗಣೇಶನ ಮೂರ್ತಿ ರಚಿಸಿಕೊಟ್ಟಿದ್ದಾರೆ.

30ನೇ ವರ್ಷದ ಗಣೇಶ ಉತ್ಸವಕ್ಕೆ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪಟಗಾರ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಆಮಂತ್ರಿಸಿದ್ದಾರೆ. ಸಮಿತಿಯವರ ಕೋರಿಕೆ ಮೇರೆಗೆ ಶಾಸಕರು ಗಣೇಶ ಉತ್ಸವ ಮಂಟಪಕ್ಕೆ ತೆರಳಿ ದೇವರ ದರ್ಶನ ಮಾಡಿದ್ದಾರೆ. ಈ ವೇಳೆ ಸಮಿತಿಯ ಪ್ರಮುಖರಾದ ಪ್ರವೀಣ್ ರಾಯ್ಕರ್, ಸಾರ್ಥಕ್ ಅಸುಕರ್, ದೇವೇಂದ್ರ ದೇವಡಿಗ, ದರ್ಶನ್ ಪಟಣಕರ್, ಗಣೇಶ್ ಪಟಣಕರ್, ಸಾಗರ್ ದೇಶಭಂಡಾರಿ, ಮದನ್ ಶೆಟ್ಟಿ, ಮೋಹನ್ ದೇವಾಡಿಗ, ಸುದೀಪ್ ಕಬ್ಬರ್ಗಿ, ಅಭಿಷೇಕ ದೇವಾಡಿಗ, ವಿನಯ ಗುನಗಿ, ಸಂದೀಪ ಬಾಂದೇಕರ್, ಪ್ರಶಾಂತ ನಾಯಕ ಇತರರು ಸೇರಿ ಶಾಸಕರನ್ನು ಸನ್ಮಾನಿಸಿದ್ದಾರೆ. ಅದಾದ ನಂತರ ಗಣೇಶ ಉತ್ಸವ ನಡೆಸಲು ಶಾಶ್ವತ ಕಟ್ಟಡ ಅಗತ್ಯವಿರುವ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ಶಿವರಾಮ ಹೆಬ್ಬಾರ್ ಅವರು ಶಾಶ್ವತ ಕಟ್ಟಡ ನಿರ್ಮಾಣದ ಭರವಸೆ ನೀಡಿದ್ದು, ಒಂದು ವಾರದೊಳಗೆ ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅದಾದ ನಂತರ ಕ್ಷೇತ್ರದಲ್ಲಿನ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಶಿವರಾಮ ಹೆಬ್ಬಾರ್ ಅವರು ವಿಚಾರಿಸಿದ್ದಾರೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದಾಗಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 22ರಂದು ಉದ್ಯಮನಗರದ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.

Leave a Reply

Your email address will not be published. Required fields are marked *