ಯಲ್ಲಾಪುರ: ಶ್ರೀಮಾತಾ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಘಕ್ಕೆ ₹೪೧.೮೨ ಲಕ್ಷ ಲಾಭ; ಶೇ. ೯ ಡಿವಿಡೆಂಡ್ ಘೋಷಣೆ

ಹಂಚಿಕೊಳ್ಳಿ

ಯಲ್ಲಾಪುರ: ಶ್ರೀಮಾತಾ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಉಮ್ಮಚಗಿ ಸಂಸ್ಥೆಯು ತನ್ನ ೨೨ನೇ ವರ್ಷದ ವಾರ್ಷಿಕ ಸರ್ವಸದಸ್ಯರ ಸಾಧಾರಣ ಸಭೆಯಲ್ಲಿ ₹೪೧,೮೨,೩೪೮.೨೮ ಲಾಭ ಗಳಿಸಿದ್ದು, ಸದಸ್ಯರಿಗೆ ೯% ಡಿವಿಡೆಂಡ್ ನೀಡಲು ನಿಶ್ಚಯಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಜಿ. ಎನ್. ಹೆಗಡೆ ಹಿರೆಸರ ತಿಳಿಸಿದರು. ಉಮ್ಮಚಗಿಯ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಹಿತದೃಷ್ಟಿಯಿಂದ ಸಿರಸಿ ಮಾರ್ಕೆಟ್ ಯಾರ್ಡ್‌ನಲ್ಲಿ ಏಳು ಗುಂಟೆ ಕಟ್ಟಡ ಸಹಿತವಾಗಿ ಜಾಗ ಖರೀದಿಸಿ ಆಸ್ತಿ ಸೃಜನೆ ಮಾಡಲಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು. ಸಂಘವು ಪ್ರಸ್ತುತ ೫,೧೬೦ ಸಾಮಾನ್ಯ ಸದಸ್ಯರನ್ನು ಹಾಗೂ ೬೨೪ ನಾಮಮಾತ್ರ ಸದಸ್ಯರನ್ನು ಹೊಂದಿದ್ದು, ಒಟ್ಟು ₹೯೨,೯೭,೨೦೦.೦೦ ಶೇರು ಬಂಡವಾಳ ಹೊಂದಿದೆ. ಅಲ್ಲದೆ, ₹೬೨,೬೨,೧೯೮ ಕಾಯ್ದಿಟ್ಟ ನಿಧಿ ಹಾಗೂ ₹೧,೪೪,೧೨,೦೫೪ ಇತರೆ ನಿಧಿಗಳನ್ನು ಹೊಂದಿದೆ. ವಿವಿಧ ಬ್ಯಾಂಕುಗಳಲ್ಲಿ ಒಟ್ಟು ₹೭,೪೦,೨೨,೨೬೯ ಹೂಡಿಕೆ ಮಾಡಲಾಗಿದ್ದು, ವರದಿ ಸಾಲಿನಲ್ಲಿ ಒಟ್ಟು ದುಡಿಯುವ ಬಂಡವಾಳ ₹೩೪,೭೨,೦೦,೬೭೯ ಆಗಿದೆ. ಸಂಸ್ಥೆಯು ಆರ್ಥಿಕವಾಗಿ ಸುಭದ್ರವಾಗಿದ್ದು, ಸಾಲಗಾರ ಸದಸ್ಯರು ಮತ್ತು ಗ್ರಾಹಕರಿಂದ ಇನ್ನೂ ಹೆಚ್ಚಿನ ಸಹಕಾರ ಸಿಕ್ಕಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ರಘುನಂದನ ಭಟ್ ಹಾಗೂ ವಕೀಲರಾದ ಪ್ರಕಾಶ್ ಭಟ್ ಮಾತನಾಡಿ ಸಂಘದ ಅಭಿವೃದ್ಧಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಇದೇ ವೇಳೆ ಸಭೆಯಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಕೈಬಿಡಲು ಒತ್ತಾಯಿಸಿ ಒಕ್ಕೊರಲಿನ ಠರಾವು ಪಾಸ್ ಮಾಡಲಾಯಿತು.

ಉತ್ತಮ ಗ್ರಾಹಕರಿಗೆ ಸನ್ಮಾನ:
ಸಂಘದ ಪ್ರಗತಿಗೆ ಸಹಕರಿಸಿದ ಉತ್ತಮ ಗ್ರಾಹಕರಾದ ಸುಮಿತ್ರಾ ಶ್ರೀಧರ ಸೇಟ್ (ಉಮ್ಮಚಗಿ), ಎಸ್. ಎಮ್. ಭಟ್ (ಬಾಳಕಲ್), ಶಂಕರನಾರಾಯಣ ಕೆ. ಭಟ್ (ಮಲವಳ್ಳಿ), ಮಾಲಿನಿ ಜಿ. ಹೆಗಡೆ (ಚವತ್ತಿ), ಕೃಷ್ಣ ತಿಮ್ಮಯ್ಯ ಹೆಗಡೆ (ಸಿರಸಿ) ಹಾಗೂ ಗಣಪತಿ ಕೆ. ಪಿಲ್ಲೋಜಿ (ಮುಂಡಗೋಡ) ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಎಸ್. ಭಟ್ ಆನಗೋಡ, ವೆಂಕಟರಮಣ ಶರ್ಮಾ, ಶಿವರಾಮ ಶಾಸ್ತ್ರಿ, ರಾಮಕೃಷ್ಣ ಎಲ್. ಭಟ್, ಎಸ್. ಎನ್. ಹೆಗಡೆ, ಕೆ. ವಿ. ಭಟ್, ರವಿ ಜಿ. ಹೆಗಡೆ, ಕೆ. ಎನ್. ಹೆಗಡೆ, ಬಾಲಕೃಷ್ಣ ಭಟ್, ಮಂಜುನಾಥ ಪೂಜಾರಿ, ಶಕುಂತಲಾ ಹೆಗಡೆ, ನಾಗರತ್ನ ಸಿದ್ದಿ, ಶೋಭಾ ವಡ್ಡರ, ಸರೋಜಾ ನಾಯ್ಕ, ವಸುಮತಿ ಹೆಗಡೆ ಹಾಗೂ ಜಿ. ಕೆ. ಹೆಗಡೆ ಕನೆನಹಳ್ಳಿ ಉಪಸ್ಥಿತರಿದ್ದರು.

ಸುನೀತಾ ಭಟ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪಾಧ್ಯಕ್ಷರು ಮತ್ತು ನಿರ್ದೇಶಕರ ಸಮ್ಮುಖದಲ್ಲಿ ಎಸ್. ಟಿ. ಭಟ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಎಸ್. ಹೆಗಡೆ ಗತ ವರ್ಷದ ನಡಾವಳಿ ಓದಿದರು. ಸೂರ್ಯನಾರಾಯಣ ಎಸ್. ಭಟ್ ವಂದಿಸಿದರು. ಸಮಗ್ರ ಸಭೆಯ ನಿರ್ವಹಣೆಯನ್ನು ಸಿ. ಎಸ್. ಪತ್ರೇಕರ ಮತ್ತು ಶಿವಾನಂದ ಸೇಟ್ ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *