ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮಂಡಲದ ಅಗಸೂರು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಸುಂಕಸಾಳ ಪಂಚಾಯತ್ನಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನ ಹಾಗೂ ಪ್ರತಿಭಟನೆ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.ರಾಜ್ಯ ಸರ್ಕಾರ ಹೊರಡಿಸಿರುವ ವಿವಾದಿತ ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಪಿಡಿಓ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.ತೆರಿಗೆ ನಿರಾಕರಣೆ: ಮನೆ ಕಳೆದುಕೊಳ್ಳುವ ಭೀತಿಪ್ರತಿಭಟನೆಯ ನೇತೃತ್ವ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕ ರಾಘವೇಂದ್ರ ಭಟ್, “ನಮ್ಮ ಪಕ್ಷದ ರಾಜ್ಯ ಘಟಕದ ಕರೆಯ ಮೇರೆಗೆ ಮಂಡಲದ ಈ ಪಂಚಾಯತ್ನಿಂದ ಹೋರಾಟ ಆರಂಭಿಸಿದ್ದೇವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ, ಬಿಜೆಪಿ ನಿಮ್ಮೊಂದಿಗಿದೆ” ಎಂದು ಭರವಸೆ ನೀಡಿದರು.ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, “ರಾಜ್ಯ ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ ಪಂಚಾಯತ್ನವರು ಇನ್ನು ಮುಂದೆ ಸಾರ್ವಜನಿಕರಿಂದ ತೆರಿಗೆ ಸ್ವೀಕರಿಸುವುದಿಲ್ಲ. ಇದು ಸಾರ್ವಜನಿಕರ ಸ್ವತ್ತನ್ನು ಸರ್ಕಾರ ಕಸಿಯುವ ಸಂಚಾಗಿದೆ. ಇದು ಕೇವಲ ಆರಂಭಿಕ ಹೋರಾಟವಾಗಿದ್ದು, ಜಿಲ್ಲೆಯ ಎಲ್ಲಾ ಪಂಚಾಯತ್ಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸರ್ಕಾರ ಈ ನಿರ್ಧಾರ ವಾಪಸ್ ಪಡೆಯದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.ಜಿಲ್ಲಾ ಮಾಧ್ಯಮ ಪ್ರಕೋಷ್ಟದ ಸಹಸಂಚಾಲಕ ಜಗದೀಶ್ ನಾಯಕ್ ಮೊಗಟ ಮಾತನಾಡಿ, “ಆಗಸ್ಟ್ ತಿಂಗಳಿನಲ್ಲಿ ಬಂದಿರುವ ಸುತ್ತೋಲೆಯಿಂದಾಗಿ ಸಾರ್ವಜನಿಕರು ಭವಿಷ್ಯದಲ್ಲಿ ತಮ್ಮ ಮನೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು” ಎಂದರು. ಜಿಲ್ಲಾ ಒಬಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಬಡವರ ಮನೆ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವುದೇ ಸರ್ಕಾರದ ಉದ್ದೇಶವಾಗಿದ್ದು, ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದರು.ಹೋರಾಟಕ್ಕೆ ವ್ಯಾಪಕ ಬೆಂಬಲಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವಕರ್ ಮತ್ತು ಮಂಡಲ ಪ್ರಭಾರಿ ಅಧ್ಯಕ್ಷ ಸಂಜಯ್ ನಾಯ್ಕ ಮಾತನಾಡಿ, ಸಾರ್ವಜನಿಕರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಕೋಲಾ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಅಗಸೂರು ಮಹಾಶಕ್ತಿ ಕೇಂದ್ರದ ನಾರಾಯಣ ಹೆಗಡೆ, ಮಂಡಲ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್, ಚಂದ್ರಕಾಂತ ನಾಯ್ಕ, ಕೇಂದ್ರದ ಅಧ್ಯಕ್ಷ ಸುರೇಶ್ ಗಾಂವಕರ್, ರೈತ ಮೋರ್ಚಾ ಮಂಡಲಾಧ್ಯಕ್ಷ ಎಂ.ಎನ್. ಭಟ್, ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾವತಿ ನಾಯ್ಕ, ನಾಗರಾಜ್ ಹೆಗಡೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್. ಭಟ್, ಮಂಡಲ ರೈತ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಯುವಮೋರ್ಚಾದ ಶಶಾಂಕ ಹೆಗಡೆ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಉದಯ್ ನಾಯ್ಕ ವಜ್ರಳ್ಳಿ ವಂದಿಸಿದರು.
ಸುಂಕಸಾಳ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಭಟನೆ: ಪಿಡಿಓ ಮೂಲಕ ರಾಜ್ಯಪಾಲರಿಗೆ ಮನವಿ!!!
















Leave a Reply