ಜಳಗೇರಿ ಗ್ರಾಮದಲ್ಲಿ ಗಜಾನೋತ್ಸವ ಸಮಿತಿ ಸಭಾಂಗಣ ನಿರ್ಮಾಣಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ

ಹಂಚಿಕೊಳ್ಳಿ

ಮುಂಡಗೋಡ: ಗ್ರಾಮೀಣ ಭಾಗದಲ್ಲಿ ಆಚರಿಸಲಾಗುವ ಗಜಾನೋತ್ಸವದಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳು ಜನರಲ್ಲಿ ಭಕ್ತಿ, ಒಗ್ಗಟ್ಟು ಮತ್ತು ಸಹೋದರತ್ವದ ಭಾವನೆಯನ್ನು ಮೂಡಿಸಲು ಪ್ರಮುಖ ಕಾರಣವಾಗುತ್ತವೆ ಎಂದು ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಹೇಳಿದರು.

ಬೆಡಸಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಳಗೇರಿ ಗ್ರಾಮದಲ್ಲಿ ಗಜಾನೋತ್ಸವ ಸಮಿತಿಯ ನೂತನ ಸಭಾಂಗಣ ನಿರ್ಮಾಣ ಕಾಮಗಾರಿಗೆ ಶಾಸಕರು ಅಧಿಕೃತವಾಗಿ ಚಾಲನೆ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ, ಗಜಾನೋತ್ಸವ ಸಮಿತಿಯು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಯ ದರ್ಶನ ಪಡೆದ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಸೌಹಾರ್ದತೆಗೆ ಇಂತಹ ಉತ್ಸವಗಳು ಅತಿ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಗಜಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಪ್ರಮುಖ ಮುಖಂಡರು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *