ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ಶ್ರೀದತ್ತ ಮಂದಿರದಲ್ಲಿ ಜುಲೈ 29 ರಂದು ಗುರು ಪೂರ್ಣಿಮಾ ನಿಮಿತ್ತ ವಿವಿದ ಧಾರ್ಮಿಕ ಕಾರ್ಯಕ್ರಮ ಹಾಗೂ ‘ದತ್ತವನ’ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಮುಂಜಾನೆ ಸತ್ಯ ದತ್ತ ವೃತ, ಗುರುಪಾದುಕಾ ಪೂಜೆ, ದತ್ತ ಸಹಸ್ರ ನಾಮದಿಂದ ತುಲಸಿ ಅರ್ಚನೆ, ಹಾಗೂ ಮಾತೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.
ಮದ್ಯಾಹ್ನ 12.30 ಕ್ಕೆ ‘ದತ್ತವನ’ ವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದು, ದತ್ತ ಮಂದಿರ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ವಿಶ್ವದರ್ಶನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಆಗಮಿಸಲಿದ್ದು ಈ ಎಲ್ಲ ಕಾರ್ಯಕ್ರಮಗಳಿಗೆ ಶ್ರೀ ದತ್ತಗುರು ಭಕ್ತರು ಆಗಮಿಸಿ ದತ್ತ ಕ್ರಪೆಗೆ ಪಾತ್ರರಾಗಬೇಕೆಂದು ಸೇವಾ ಸಮೀತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ವಿನಂತಿಸಿದ್ದಾರೆ.
ಜು. 29 ರಂದು ಗುರು ಪೂರ್ಣಿಮಾ ನಿಮಿತ್ತ ದತ್ತ ಮಂದಿರದಲ್ಲಿ ವಿವಿಧ ಕಾರ್ಯಕ್ರಮ















Leave a Reply