ಯಲ್ಲಾಪುರ: ಧಾತ್ರೀ ಫೌಂಡೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲಾ ಮಕ್ಕಳಿಗೆ ಉಚಿತ ಪಟ್ಟಿ ವಿತರಣಾ ಕಾರ್ಯಕ್ರಮ ಯಲ್ಲಾಪುರ ತಾಲೂಕಿನ ಜಂಬೇಸಾಲ ಸ.ಕಿ.ಪ್ರಾ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಪಟ್ಟಿ ವಿತರಿಸಿ ಮಾತನಾಡಿದ ಧಾತ್ರೀ ಫೌಂಡೇಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಅವರು, ತನ್ನ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಉದ್ದೇಶಗಳಿಂದ ಇಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ನೀವು ಬೆಳೆದು ದೊಡ್ಡವರಾದ ಮೇಲೆ ನೀವೂ ಕೂಡ ಸಮಾಜಕ್ಕೆ ಏನನ್ನಾದರು ಕೊಡುವ ಅಥವಾ ಒಳಿತಾಗುವ ಕಾರ್ಯವನ್ನು ಮಾಡಬೇಕು ಎಂದು ಮಕ್ಕಳಿಗೆ ಹೇಳಿದರು.
ಗ್ರಾ.ಪಂ ಮಾಜಿ ಸದಸ್ಯ ಸುಬ್ಬಣ್ಣ ಉದ್ದಾಬೈಲ್, ಸ್ಳಳೀಯ ಮುಖಂಡ ಗುರು ಭಟ್ಟ ಜಂಬೇಸಾಲ ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.













Leave a Reply