ಒಂದೆ ವರ್ಷದಲ್ಲಿ ಎರಡು ಬಾರಿ ಗರ್ಭಿಣಿ ಯಾದ 15 ರ ಅಪ್ರಾಪ್ತೆ…….ಎತ್ತ ಸಾಗುತ್ತಿದೆ ನಮ್ಮ ಸಮಾಜ.. ಓದಲೇ ಬೇಕಾದ ವರದಿ

ಹಂಚಿಕೊಳ್ಳಿ

ಧಾರವಾಡ : ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿದ್ದು, ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿದ್ದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಲ್ಲದೆ, ಈಗ ಮತ್ತೆ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.
ಒಂದೇ ಪರಿವಾರದ ಇಬ್ಬರು ಅಪ್ರಾಪ್ತ ಬಾಲಕಿಯರಲ್ಲಿ ಒಬ್ಬಳು, ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದು  ಅದೆ ಬಾಲಕಿ  ಇದೀಗ ಮತ್ತೆ ಗರ್ಭಿಣಿಯಾಗಿದ್ದು, ಪೊಲೀಸರು ಪೋಕ್ಸೋ ಪ್ರಕರಣದ ತನಿಖೆ ಆರಂಭಿಸಿದ್ದಾರೆ .
ಹುಬ್ಬಳ್ಳಿ-ಧಾರವಾಡ  ವ್ಯಾಪ್ತಿಯ ಹಳೆ ಹುಬ್ಬಳ್ಳಿ ಠಾಣೆ ಸರಹದ್ದಿನಲ್ಲಿ ಈ ಆತಂಕಕಾರಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
2025 ರಲ್ಲಿ ದುರುಳರು, 15 ವರ್ಷದ ಬಾಲಕಿಯನ್ನು ರೈಲು ನಿಲ್ದಾಣದ ಸಮೀಪದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ದೂರು ದಾಖಲಿಸಿದ ನಂತರ ಈ ಘಟನೆ ಹೊರ ಬಂದಿದೆ.
ಈ ಅತ್ಯಾಚಾರ ಘಟನೆಯ ನಂತರ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ನಂತರ ಹುಡುಗಿಯ ಪೋಷಕರು ನವಜಾತ ಶಿಶುವನ್ನು ಅಪರಿಚಿತ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ, ಬಾಲಕಿಯ ಮೇಲೆ ಅದೇ ಆರೋಪಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ ಒಂದೇ ವರ್ಷದೊಳಗೆ ಆಕೆ ಎರಡನೇ ಬಾರಿ ಗರ್ಭಿಣಿಯಾಗಿದ್ದಾಳೆ.
ಪೊಲೀಸರು ಈ ಆರೋಪಗಳ ಜೊತೆಗೆ  ಕಾರಣವಾದ ಸಮಯದ ಬಗ್ಗೆ  ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಮತ್ತೆ ಗರ್ಭಿಣಿಯಾಗಿರುವುದು ಕಂಡುಬಂದ ನಂತರ ಗುರುವಾರ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
“ಇದು ಪೋಕ್ಸೋ ಸ್ಪಷ್ಟ ಪ್ರಕರಣ. ಈ ಹಿಂದೆ ಮಗುವಿಗೆ ಜನ್ಮ ನೀಡಿದ್ದ 15 ವರ್ಷದ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ” ಎಂದು ಅವರು ಹೇಳಿದರು.
“ಈ ಹಿಂದೆಯೂ ಕೂಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತಳು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಕೇಸ್ ತನಿಖೆ ನಡೆಸುವಾಗ ಅದೇ ಕುಟುಂಬದ ಸಹೋದರಿಯ ಮಗಳೂ ಕೂಡ ಅಪ್ರಾಪ್ತ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ .

ಮೇಲೆ ಮತ್ತೊಂದು ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಬಾಲಕಿಗೆ ಮೊದಲು ಒಂದು ಹೆರಿಗೆಯಾಗಿದೆ. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದು, ಈ ಎರಡೂ ಪ್ರಕರಣಗಳು ತುಂಬಾ ಗಂಭೀರ ಪ್ರಕರಣಗಳಾಗಿವೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಹೆಸರು ಹೇಳಲು ಅವರ ಪೋಷಕರು ಹಾಗೂ ಅಪ್ರಾಪ್ತರು ಮುಂದೆ ಬಂದಿಲ್ಲ. ಆದರೆ, ತನಿಖೆ ನಡೆಸಲಾಗುತ್ತಿದೆ. ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ” ಎಂದು ತಿಳಿಸಿದರು.
ಇಬ್ಬರೂ ಹುಡುಗಿಯರು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ. ಅವರು ಯಾವುದೇ ರೀತಿಯ ಹೇಳಿಕೆ ನೀಡಲು ಸಿದ್ಧರಿಲ್ಲ. ಆರೋಗ್ಯದ ದೃಷ್ಟಿಯಿಂದ ಅವರಿಗೆ ಚೇತರಿಸಿಕೊಳ್ಳಲು ನಾವು ಅವಕಾಶ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂಬಂಧ ಇಬ್ಬರು ಹುಡುಗಿಯರ ಕುಟುಂಬ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇತ್ತಿಚಿಗೆ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಇದರಿಂದ ಹುಟ್ಟುವ ಮಗು ಅನಾಥವಾಗುದರ ಜೊತೆಗೆ ಶಾಲೆಗೆ ಹೋಗುವ ಮಕ್ಕಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹದಿ ಹರೆಯದ ಸಮಯದಲ್ಲಿ ಮಕ್ಕಳಿಗೆ ನೀತಿ ಪಾಠ ದೊಂದಿದೆ ಜೀವನ ಮೌಲ್ಯ , ವಯಸ್ಸಿನಲ್ಲಿ ಬರುವ ಆಕರ್ಷಣೆ ಬಗ್ಗೆ ತಿಳಿ ಹೇಳಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಪಾಲಕರು ಪೋಷಕರು , ಶಿಕ್ಷಕರು ಮಕ್ಕಳನ್ನು ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡಲಿ. ಮಕ್ಕಳು ಸಹ ವಿದ್ಯಾಭ್ಯಾಸದ ಸಮಯದಲ್ಲಿ  ಅನಧಿಕೃತ ಕಾರ್ಯಗಳಿಗೆ ಮುಂದಾಗದೆ ಜೀವನವನ್ನು ಉಜ್ವಲ ಗೊಳಿಸಲಿ ಎನ್ನುವುದೇ ಈ ವರದಿಯ ಆಶಯ …

Leave a Reply

Your email address will not be published. Required fields are marked *

Advertisement


This will close in 3 seconds