2-8-2026 ಆದಿತ್ಯವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.
ಕರಾವಳಿಯ ಕಾಸರಗೋಡು ದ.ಕ ಉಡುಪಿ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಮಳೆಯಾಗಿದೆ. . ಬೆಳ್ತಂಗಡಿ ಕಾರ್ಕಳ ಸುಳ್ಯ ಕಡಬ ತಾಲ್ಲೂಕುಗಳಲ್ಲಿ ನಿನ್ನೆ ಭಾರೀ ಮಳೆಯಾಗಿತ್ತು. ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ಶೃಂಗೇರಿ ಕೊಪ್ಪ ತೀರ್ಥಹಳ್ಳಿ ಹೊಸನಗರ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದೆ .ದ.ಕ. ದ ಬೆಳ್ತಂಗಡಿ ತಾಲ್ಲೂಕು ಮುಂಡಾಜೆಯಲ್ಲಿ 348.5mm ಭಾರಿ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ದ.ಕ ಉಡುಪಿ ಕಾಸರಗೋಡು ಜಿಲ್ಲೆಗಳಲ್ಲಿ ಮೋಡ – ಮಳೆಯ ವಾತಾವರಣ ಮುಂದುವರೆಯಲಿದೆ. ಗ್ರಾಮಾಂತರ ಮತ್ತು ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಉ.ಕ ಜಿಲ್ಲೆಯಲ್ಲಿ ಮಧ್ಯಾಹ್ನನಂತರ ಸಾಧಾರಣ ಮಳೆಯ ಮುನ್ಸೂಚನೆ ಇದೆ. ನಾಳೆಯಿಂದ ಮಳೆ ಪ್ರಮಾಣ ಕಡಿಮೆ ಆಗಲಿದ್ದು ಸ್ವಲ್ಪ ಬಿಸಿಲು ಆರಂಭವಾದರೂ ಒಂದೆರಡು ಸಾಮಾನ್ಯ ಮಳೆ ಮುಂದುವರೆಯಲಿದೆ.
ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲಿ ಉತ್ತಮ ಮಳೆ ಮುಂದುವರೆಯಲಿದೆ. ಉಳಿದ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ನಾಳೆಯಿಂದ ಮಳೆ ಕಡಿಮೆ ಆಗಬಹುದು.
ದಕ್ಷಿಣ ಒಳನಾಡಿನ ಮೈಸೂರು ಚಾಮರಾಜನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ದಾವಣಗೆರೆ ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು. ಅಧಿಕ ಮಳೆಯ ಸಾಧ್ಯತೆ ಇಲ್ಲ.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಗುಜರಾತ್ ನ ವಾಯುಭಾರಕುಸಿತ ದುರ್ಬಲ ಆಗುತ್ತಿದ್ದು ಇವತ್ತಿನಿಂದ ಮಳೆ ಪ್ರಮಾಣ ಕಡಿಮೆ ಆಗಬಹುದು. ದಕ್ಷಿಣದ ಕರಾವಳಿಯಲ್ಲಿ ಸಾಮಾನ್ಯ ಮುಂಗಾರು ಮುಂದುವರೆಯಲಿದೆ.










Leave a Reply