ಮತ್ತೆ ಶುರುವಾಗ್ತಿದೆ ಅಬ್ಬರದ ಮಳೆ …. ನೋಡಿ ಹವಮಾನ ವರದಿ…..

ಹಂಚಿಕೊಳ್ಳಿ

28-7-2026 ಮಂಗಳವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.

ಕರಾವಳಿಯ ಜಿಲ್ಲೆಗಳಲ್ಲಿ ದ.ಕ ಕಾಸರಗೋಡು ನಿನ್ನೆ ಸಾಮಾನ್ಯ ಮಳೆಯಾಗಿದೆ. .ಉ.ಕ ಉಡುಪಿ ಅಧಿಕ ಮಳೆಯಾಗಿತ್ತು. ಮಲೆನಾಡಿನ ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದು ಒಳನಾಡಿನ ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದ್ದು ಆಗಾಗ ಗುಡುಗು ಸಹಿತ ಸಾಮಾನ್ಯ ಮಳೆ ಮುಂದುವರೆಯಲಿದೆ. ದ.ಕ ಉಡುಪಿ ಉ.ಕ ಕಾಸರಗೋಡು ಜಿಲ್ಲೆಗಳಲ್ಲಿ ರಾತ್ರಿಯೂ ಮಳೆಯಾಗಲಿದ್ದು 30-50mm ಸರಾಸರಿ ಮಳೆಯಾಗಬಹುದು. ಕಾಸರಗೋಡು ಗಡಿಭಾಗಗಳಲ್ಲಿ, ಸುಳ್ಯ ಪುತ್ತೂರು ಕಡಬ ತಾಲ್ಲೂಕುಗಳಲ್ಲಿ ಉ.ಕ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉತ್ತರಭಾರತದ ವಾಯುಭಾರಕುಸಿತ ಪಶ್ಚಿಮಕ್ಕೆ ಬಂದು ಶಿಥಿಲವಾಗುವ ತನಕ ಈ ವಾರಪೂರ್ತಿ ಸಾಧಾರಣ ಮಳೆ ಮುಂದುವರೆಯಲಿದ್ದು ಮುಂದಿನ ವಾರದ ಆರಂಭದ 2-3 ದಿನ ಮಳೆ ಸ್ವಲ್ಪ ಕಡಿಮೆ ಆಗಿ ಆಗಸ್ಟ್ 7ರಿಂದ 13 ಮತ್ತೆ ಸಾಧಾರಣ ಮಳೆ ಮುಂದುವರೆಯುವುವ ಮುನ್ಸೂಚನೆ ಇದೆ.

ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಸಮೀಪದ ತಾಲ್ಲೂಕುಗಳ ಘಟ್ಟಪ್ರದೇಶಗಳಲ್ಲಿ ಇವತ್ತು ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಸಾಮಾನ್ಯ ಮಳೆಯಾಗಬಹುದು. ಈ ವಾರ ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರೆಯಲಿದೆ.

ದಕ್ಷಿಣ ಒಳನಾಡಿನಲ್ಲಿ ಸಂಜೆ ಭಾಗಷಃ ಮೋಡದ ವಾತಾವರಣ ಇರಲಿದ್ದು ವಿಜಯನಗರ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳ ಕೆಲವೆಡೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಬಹುದು.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಕಲ್ಬುರ್ಗಿ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ – ಅಲ್ಲಲ್ಲಿ ತುಂತುರು ಮಳೆಯ ವಾತಾವರಣ ಇರಬಹುದು.

ಬಂಗಾಳಕೊಲ್ಲಿಯ ವಾಯುಭಾರಕುಸಿತದ ಪ್ರಭಾವದಿಂದ ಉತ್ತರ ಭಾರತದಲ್ಲಿ ಇನ್ನೊಂದು ವಾರ ಮಳೆಯಾಗಲಿದ್ದು ಕೇರಳ ಕರ್ನಾಟಕ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆ ಮುಂದುವರೆಯಲಿದೆ. ಆಗಸ್ಟ್ 2ನೇ ವಾರವೂ ಇನ್ನೊಂದು ವಾಯುಭಾರಕುಸಿತದ ಕಾರಣ ಮಳೆ ಮುಂದುವರೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *