ಸಾಲಗಾರರಾಗಲು ಬ್ರಾಹ್ಮಣ ಸಮುದಾಯಕ್ಕೆ  ಬಂಪರ್ ಆಫರ್: ಕೇವಲ 4% ಬಡ್ಡಿದರದಲ್ಲಿ ಆರ್ಥಿಕ ಸೌಲಭ್ಯ.. 20% ಸಬ್ಸಿಡಿ ನೀಡುವ ಸರ್ಕಾರ

ಹಂಚಿಕೊಳ್ಳಿ

ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ 2026–27ನೇ ಸಾಲಿನ ‘ವಿಪ್ರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ’ಗೆ ಅರ್ಜಿ ಆಹ್ವಾನಿಸುವ ಮಾಹಿತಿ ಪುಸ್ತಕವನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ವರ್ಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ ಹಾಗೂ ಪಶುಸಂಗೋಪನೆ ಮುಂತಾದ ಸ್ವಯಂ ಉದ್ಯೋಗಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ 2025–26ನೇ ಸಾಲಿನಲ್ಲಿ ‘ವಿಪ್ರ ಸ್ವ ಉದ್ಯೋಗ ನೇರ ಸಾಲ ಯೋಜನೆ’ಯನ್ನು ನಮ್ಮ ಸರ್ಕಾರ ಆರಂಭಿಸಿತು ಎಂದು ಹೇಳಿದರು.

ಈ ಯೋಜನೆಯಡಿ ಕನಿಷ್ಠ 1 ಲಕ್ಷ ರೂಪಾಯಿಗಳಿಂದ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. ಸಾಲದ ಮೊತ್ತದಲ್ಲಿ 20 ಶೇಕಡಾ ಸಬ್ಸಿಡಿ ನೀಡಲಾಗುತ್ತಿದ್ದು, ಉಳಿದ 80 ಶೇಕಡಾ ಮೊತ್ತವನ್ನು ವಾರ್ಷಿಕ 4 ಶೇಕಡಾ ಬಡ್ಡಿದರದಲ್ಲಿ ಒಟ್ಟು 34 ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *