ಆಶ್ರಯ ನೀಡಿದ ಮನೆಯಲ್ಲಿ ಕಳ್ಳತನ! ಯಲ್ಲಾಪುರ ಮೂಲೆಗುಂಡ್ಕಲ್ ಕಳ್ಳತನಕ್ಕೆ ಬಿಗ್ ಟ್ವಿಸ್ಟ್! ಹೆಸರು ಬದಲಿಸಿ 6 ತಿಂಗಳು ಕೆಲಸ ಮಾಡಿದ್ದ ಚಾಣಾಕ್ಯ ಕಳ್ಳ?

ಹಂಚಿಕೊಳ್ಳಿ

ಕಳವು ಮಾಡಿದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಾಗೂ ವಾಹನಗಳು ವಶಕ್ಕೆ

ಯಲ್ಲಾಪುರ: ತಾಲೂಕಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಒಂಟಿ ಮನೆ ಕಳ್ಳತನದ ಆರೋಪಿಗಳನ್ನು   ಯಲ್ಲಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ಕಳುವಾಗಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನ.5ರಂದು ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಟ್ಕಮನೆ ಮೂಲೆ ಗುಂಡ್ಕಲ್ ನ  ಮನೆಯೊಂದರಲ್ಲಿ  ಚಾಕು ತೋರಿಸಿ ದಂಪತಿಗಳಿಬ್ಬರನ್ನು ಹೆದರಿಸಿ  ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು, ಮೊಬೈಲ್ ಫೋನ್‌ಗಳು, ನಗದು ಹಣ ಹಾಗೂ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದರು. ಈ ಕುರಿತು ದಾಖಲಾದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹಸನಸಾಬ, ಮುಬಾರಕ್, ಮಹಮ್ಮದ್ ವಾಸಿಂ ಹಾಗೂ ಅಬ್ಬಾಸಲಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಕೈಗಡಿಯಾರಗಳು, ಮೊಬೈಲ್ ಫೋನ್‌ಗಳು, ನಗದು ಹಣ ಸೇರಿದಂತೆ ಕೃತ್ಯಕ್ಕೆ ಬಳಸಿದ ಹಾಗೂ ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಸಿ ಪಿ ಐ ಸುರೇಶ ಕಂಬಾರ್ ,ಗೋಕರ್ಣ ಠಾಣೆಯ ಸಿ ಪಿ ಐ ಶ್ರೀಧರ ಎಸ್ ಆರ್,  ಪಿ ಎಸ್ ಐ ಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ , ಮಹಾವೀರ ಕಾಂಬಳೆ, ಗಣಪತಿ ಶೇರುಗಾರ ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಶಫಿ, ಬಸವರಾಜ್ ಡಿ ಕೆ, ಮಹಾವೀರ್ ಡಿ ಎಸ್ , ಸಂತೋಷ ಬಾಳೆರ ಮುಂತಾದವರು ಇದ್ದರು.

ಕೆಲಸ ಮಾಡಿದ ಮನೆಗೆ ಕನ್ನ?

ಈ ಕಳೆದ ಒಂದು ವರ್ಷದ ಹಿಂದೆ ಆರೋಪಿ ಹಸನ್ ಸಾಬ್ ಹಾಗೂ ಆತನ ಪತ್ನಿ ,ಮೂಲೆ ಗುಂಡ್ಕಲ್ ಸಮೀಪ  ಪ್ರಸ್ತುತ ಕಳುವಾದ ಮನೆಯಲ್ಲಿ ಆರು ತಿಙಗಳುಗಳ ಕಾಲ ಕೆಲಸ ಮಾಡಿದ್ದರು ಏನ್ನಲಾಗಿದೆ. ನಂತರ ಕಳೆದ ಕೆಲ ದಿನಗಳ ಹಿಂದೆ ವ್ಯಾಪಾರ ಮಾಡುತ್ತಿರುವುದಾಗಿ ಒಮ್ಮೆ ಬಂದು ಸಹ ಹೋಗಿದ್ದನು ಎನ್ನಲಾಗಿದೆ. ನಂತರ ಪ್ರೀ ಪ್ಲಾನ್ ಮಾಡಿ ಮನೆಯ ಸಂಪೂರ್ಣ ವಿವರ ತಿಳಿದಿದ್ದ ಇವರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *