
ಶಿರಸಿ: ವಿವಾದಿತ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಅನುಷ್ಠಾನದ ಕುರಿತು ಸಾಧಕ-ಬಾಧಕಗಳ ಬಗ್ಗೆ ಮುಕ್ತ ಹಾಗೂ ಆಳವಾದ ಚರ್ಚೆ ನಡೆದ ಬಳಿಕವೇ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆಲಮಟ್ಟಿ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಕೆಲವು ಪ್ರದೇಶಗಳು ಮುಳುಗಡೆಯಾಗಿದ್ದರೂ, ಇಂದು ಅದರಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗುತ್ತಿದೆ. ಅದೇ ಮಾದರಿಯಲ್ಲಿ ಬೇಡ್ತಿ–ವರದಾ ಯೋಜನೆಯನ್ನೂ ಸಮಗ್ರವಾಗಿ ಪರಿಶೀಲಿಸಬೇಕಿದೆ ಎಂದರು.
ಯೋಜನೆಯಿಂದ ಒಂದು ಕಡೆ ಸ್ವಲ್ಪ ಮಟ್ಟಿಗೆ ಹಾನಿಯಾಗುವ ಆತಂಕವಿದ್ದರೂ, ಮಗದೊಂದು ಭಾಗದ ಕೋಟ್ಯಂತರ ಜನರಿಗೆ ಇದು ಶಾಶ್ವತವಾಗಿ ನೆರವಾಗಲಿದೆ. ಆದ್ದರಿಂದ ಪರಿಸರಕ್ಕಾಗುವ ಹಾನಿ, ಸ್ಥಳೀಯರ ಬದುಕು ಹಾಗೂ ಯೋಜನೆಯಿಂದ ಸಿಗುವ ಲಾಭಗಳು ಸೇರಿದಂತೆ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
















Leave a Reply