ಯಲ್ಲಾಪುರ: ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 2028 ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿ ಎಂದು ಸಾಮಾಜಿಕ ಕಾರ್ಯಕರ್ತ ಬಾಲು ನಾಯಕ್ ಹೇಳಿದರು.
ಬುಧವಾರ ಮಾಧ್ಯಮವೊಂದರಲ್ಲಿ “ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಲಗೈ ಬಂಟ ಬಾಲು ನಾಯಕ್ ಬಿಜೆಪಿ ಬಳ್ಳಾರಿಯ ಪಾದ ಯಾತ್ರೆಯಲ್ಲಿ ಭಾಗಿ” ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು , ಶಿವರಾಮ ಹೆಬ್ಬಾರ್ ಅವರು ಶಾಸಕ ಹಾಗೂ ಬಿಜೆಪಿಯಲ್ಲಿ ಸಚಿವರಾಗಿದ್ದಾಗ ಅವರ ಆಪ್ತ ವಲಯದಲ್ಲಿ ನಾನು ಗುರುತಿಸಿಕೊಂಡಿದ್ದು ಸತ್ಯ. ಕಾರಣ ಅಶಕ್ತರಿಗೆ , ನಮ್ಮ ಕಾರ್ಯಕರ್ತರಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಉದ್ದೇಶವಿತ್ತು. ಆ ಕಾರಣದಿಂದ ಆಗಿನ ಸಚಿವ, ಪ್ರಸ್ತುತ ಶಾಸಕ ಹೆಬ್ಬಾರ್ ಅವರ ಜೊತೆ ಆತ್ಮಿಯತೆ ಇತ್ತು . ಆದರೆ ಅವರು ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಒಲವು ತೊರಿದ್ದರಿಂದ ನಮ್ಮ ನಡುವೆ ಯಾವುದೇ ಆತ್ಮಿಯತೆ ಇಲ್ಲ. ನಾನು ಮೂಲದಿಂದಲೂ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ. ಹಿಂದೆಯೂ ಸಾಮಾನ್ಯ ಕಾರ್ಯಕರ್ತ ನಾಗಿ ಕೆಲಸ ಮಾಡಿದ್ದೇನೆ ಮುಂದೆಯೂ ಪಕ್ಷ ಸೂಚಿಸಿದ ಹಾಗು ಸಂಘಟನೆ ಗೋಸ್ಕರ ನಿಷ್ಠೆ ಹಾಗು ಭಕ್ತಿ ಇಂದ ಕೆಲಸ ಮಾಡುವ ಅಭಿಲಾಷೆ ಹೊಂದಿದ್ದೇನೆ. ಹೆಬ್ಬಾರ್ ಅವರ ಆಪ್ತ ಎಂಬ ಹೇಳಿಕೆಯಿಂದ ಬಿಜೆಪಿಯಲ್ಲಿ ನನ್ನಿಂದ ಯಾವ ಗೊಂದಲವೂ ಆಗಬಾರದು ಎಂಬ ಕಾರಣದಿಂದ ಈ ಹೇಳಿಕೆ ನೀಡುತ್ತಿದ್ದೆನೆ ಎಂದರು. ಹಿಂದೆಯೂ ಮುಂದೆಯೂ ಬಿಜೆಪಿ ಯ ಹೆಮ್ಮೆಯ ಕಾರ್ಯಕರ್ತ ನಾಗಿ ಸೇವೆ ಸಲ್ಲಿಸುತ್ತೇನೆ ಎಂದರು.


















Leave a Reply