ಹೊನ್ನಗದ್ದೆಯ ಪುರಾಣ ಪ್ರಸಿದ್ಧ ಶ್ರೀ ವೀರಭದ್ರದೇವರ ವಾರ್ಷಿಕ ಬಿದಿಗೆ ಹಬ್ಬ  ನಾಳೆ!

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಹೊನ್ನಗದ್ದೆಯ ಪುರಾಣ ಪ್ರಸಿದ್ಧ  ಶ್ರೀ ವೀರಭದ್ರ ಗುಡಿ ದೇವಸ್ಥಾನದಲ್ಲಿ ನವೆಂಬರ್ 11ರ ಬುಧವಾರ ವಾರ್ಷಿಕ ಬಿದಿಗೆ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೊನ್ನಗದ್ದದ ಶ್ರೀ ವೀರಭದ್ರದೇವರು ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧರಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಹಬ್ಬದ ಅಂಗವಾಗಿ ಬೆಳಿಗ್ಗಿನಿಂದ ವಿಶೇಷ ಪೂಜಾ ಕೈಂಕರ್ಯ ನಡೆಯಲಿದ್ದು ಸಂಜೆ 7 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ,ದೀಪೋತ್ಸವ ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಬ್ಬದ ಪ್ರಯುಕ್ತ ಹಣ್ಣು ಕಾಯಿ, ನೂತನ ದಂಪತಿಗಳ ದೇವರ ದರ್ಶನ, ನೂತನ ಮಕ್ಕಳ ದೇವರ ದರ್ಶನ ಹಾಗೂ ತುಲಾಭಾರ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *