
(ಯಲ್ಲಾಪುರ): ಪಾರ್ಥಸಾರಥಿ ಯಕ್ಷ ಕಲಾಬಳಗ ಬಾರೆ-ಮಳವಳ್ಳಿ ಇದರ ಉದ್ಘಾಟನೆ, ಯಕ್ಷರತ್ನ ಹಾಗೂ ಸಾಧಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು “ಕರ್ಣಾರ್ಜುನ ಕಾಳಗ” ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ನವೆಂಬರ್ 11, 2026ರ ಬುಧವಾರ ಮಧ್ಯಾಹ್ನ 4:30ಕ್ಕೆ ಮಳವಳ್ಳಿ ಯ ಶ್ರೀರಾಮಲೀಲಾ ರಂಗಮಂದಿರದಲ್ಲಿ ಜರುಗಲಿದೆ.

ಕಾರ್ಯಕ್ರಮವನ್ನು ಜನಪ್ರಿಯ ಅರ್ಥಧಾರಿಗಳಾದ ವಿದ್ವಾನ್ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರು ಉದ್ಘಾಟಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಾ. ಜೈರಾಮ್ ಎಂ. ಭಟ್ಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ ಟಿ .ಎಸ್.ಎಸ್. ಯಲ್ಲಾಪುರದ ಅಧ್ಯಕ್ಷರಾದ ಎನ್. ಕೆ. ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಪಾರ್ಥಸಾರಥಿ ಯಕ್ಷ ಕಲಾಬಳಗದ ಅಧ್ಯಕ್ಷರಾದ ಶ್ರೀಧರ ಭಟ್ಟ ಗಂಗೋತ್ರಿಯವರು ಉಪಸ್ಥಿತರಿರಲಿದ್ದಾರೆ.
ಸಮಾರಂಭದಲ್ಲಿ ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಬ್ರಣ್ಣ ಬೋಳ್ಮನೆ, ಮಾವಿನಮನೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಬ್ರಣ್ಣ ಕುಂಟೆಗಾಳಿ, ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮುಕ್ತೇಸರರಾದ ರವಿ ಹುಳಸೆ, ಯಲ್ಲಾಪುರ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಸದಾನಂದ ಎನ್. ಭಟ್ಟ, ಪ್ರಮುಖರಾದ ಸೂರ್ಯನಾರಾಯಣ ಚಂದ್ರಶೇಖರ ಭಟ್ಟ ಹಾಗೂ ಬಾರೆಯ ಸಾಮಾಜಿಕ ಕಾರ್ಯಕರ್ತರಾದ ಪ್ರಕಾಶ ಅನಂತ ಭಟ್ಟ ಮುಂತಾದ ಪ್ರಮುಖರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಹಿರಿಯ ಅರ್ಥಧಾರಿಗಳಾದ ಗಣಪತಿ ರಾಮಚಂದ್ರ ಭಾಗವತ ಕವಾಳೆ ಅವರಿಗೆ ‘ಯಕ್ಷರತ್ನ ಪ್ರಶಸ್ತಿ ಹಾಗೂ ಸಿಎ ಚಂದ್ರಶೇಖರ ಗಾಂವ್ಕರ್ ನೆಲೆಪಾಲ್ ಅವರಿಗೆ ‘ಸಾಧಕಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾಪ್ರತಿಭೆಗಳಿಂದ ‘ಕರ್ಣಾರ್ಜುನ ಕಾಳಗ’ ತಾಳಮದ್ದಲೆ ನಡೆಯಲಿದೆ.

ಹಿಮ್ಮೇಳದಲ್ಲಿ: ಭಾಗವತರಾಗಿ ಅನಂತ ಹೆಗಡೆ ದಂತಳಿಗೆ ಹಾಗೂ ದಿನೇಶ ಭಾಗವತ ಅಬ್ಬಿತೋಟ, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ ಹಾಗೂ ಗಣಪತಿ ಭಾಗ್ವತ ಕವಾಳೆ, ಚಂಡೆಯಲ್ಲಿ ಪ್ರಮೋದ ಹೆಗಡೆ ಕಬ್ಬಿನಗದ್ದೆ ಸಹಕರಿಸಲಿದ್ದಾರೆ.
ಅರ್ಥಧಾರಿಗಳಾಗಿ: ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ವಿದ್ವಾನ್ ನಾರಾಯಣ ದೇಸಾಯಿ ಮೈಸೂರು, ವಿದ್ವಾನ್ ಗಣೇಶ ಭಟ್ಟ ಸಂಕಸಾಳ, ಶ್ರೀಧರ ಭಟ್ಟ ಗಂಗೋತ್ರಿ, ಪ್ರೊಫೆಸರ್ ಪವನ್ ಕಿರಣಕೇರೆ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ, ಮಂಜುನಾಥ ವೇ. ಭಟ್ಟ ಬಾರೆ, ಸುಬ್ರಾಯ ಹೆಬ್ಬಾರ ಗುಡೇಪಾಲ್ ಹಾಗೂ ದೇವೇಂದ್ರ ಕುಣಬಿ ಸ್ವಾಮಿಕೇರಿ ಭಾಗವಹಿಸಲಿದ್ದಾರೆ.
ವೀಣಾ ಶಿವರಾಮ ಹೆಗಡೆ ಪ್ರಾರ್ಥಿಸಲಿದ್ದಾರೆ. ಪ್ರಸನ್ನ ಗಾಂವ್ಕರ ವಾಗಳ್ಳಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಕಲಾಭಿಮಾನಿಗಳಿಗೆ ಲಘು ಉಪಹಾರ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಪಾರ್ಥ ಸಾರಥಿ ಯಕ್ಷ ಕಲಾ ಬಳಗದ ಅಧ್ಯಕ್ಷ ಶ್ರೀಧರ ಭಟ್ ಗಂಗೋತ್ರಿ ತಿಳಿಸಿದ್ದಾರೆ.
















Leave a Reply