ಹಳ್ಳಿನ್ಯೂಸ್ ವರದಿಗೆ ಪೊಲೀಸ್ ಇಲಾಖೆಯ ತಕ್ಷಣದ ಸ್ಪಂದನೆ: ವರದಿ ಪ್ರಕಟವಾದ 4 ತಾಸಿನೊಳಗೆ ಅರಬೈಲ್ ಘಟ್ಟದಲ್ಲಿದ್ದ ಲಾರಿ ತೆರವು!

ಹಂಚಿಕೊಳ್ಳಿ

ಯಲ್ಲಾಪುರ: ಅರಬೈಲ್ ಘಟ್ಟದ ಶಿರಲೆ  ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-52ರ ಅರ್ಧ ರಸ್ತೆಯನ್ನು ಅತಿಕ್ರಮಿಸಿ, ಅಪಾಯಕಾರಿ ತಿರುವಿನಲ್ಲಿ ಸುಮಾರು ಒಂದು ತಿಂಗಳಿಂದ ನಿಂತಿದ್ದ ಲಾರಿಯನ್ನು *ಹಳ್ಳಿನ್ಯೂಸ್* 14 ರಂದು ಬೆಳಿಗ್ಗೆ  ವರದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲೇ ತೆರವುಗೊಳಿಸಲಾಗಿದೆ.

ಈ ಹಿಂದೆ ಇದೇ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ನಿಂತಿದ್ದ ಲಾರಿ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಈ ಸಮಸ್ಯೆಯನ್ನು ಅಕ್ಟೋಬರ್ 14 ರಂದು  ವರದಿ ಮೂಲಕ ಹಳ್ಳಿನ್ಯೂಸ್ ಇಲಾಖೆಯ ಗಮನಕ್ಕೆ ತಂದ ಬೆನ್ನಲ್ಲೇ ಕೇವಲ 4 ತಾಸಿನೊಳಗೆ ತ್ವರಿತವಾಗಿ ಕ್ರಮ ಕೈಗೊಂಡ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಜನರ ಸಮಸ್ಯೆಗೆ ಧ್ವನಿಯಾದ ಹಳ್ಳಿನ್ಯೂಸ್, ಜನರ ಸುರಕ್ಷತೆಗೆ ಸ್ಪಂದಿಸಿದ ಪೊಲೀಸ್ ಇಲಾಖೆ! ಸಾರ್ವಜನಿಕ ಹಿತಾಸಕ್ತಿಯ ವರದಿಗೆ ತಕ್ಷಣ ಸ್ಪಂದಿಸಿ ಸಂಭವನೀಯ ಅಪಾಯವನ್ನು ತಪ್ಪಿಸಲು ನೆರವಾದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ.

ಹಳ್ಳಿನ್ಯೂಸ್ — ಡಿಜಿಟಲ್ ಮಾಧ್ಯಮದ ನಂಬಿಕಸ್ಥ ಧ್ವನಿ

Leave a Reply

Your email address will not be published. Required fields are marked *