ದೆಹಲಿಯಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರಿಗೆ ಸನ್ಮಾನ

ಹಂಚಿಕೊಳ್ಳಿ

ಯಲ್ಲಾಪುರ: ಪಟ್ಟಣದ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರನ್ನು ದೆಹಲಿಯಲ್ಲಿ ನಡೆದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 111ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬೆಳಗಾವಿಯ ವಿರಕ್ತಿಮಠದ ಶ್ರೀ ಮುನಿಪ್ರ ಡಾ. ಮಹಾಂತೇಶ ಪ್ರಭು ಅವರು ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರಿಗೆ ಸನ್ಮಾನ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದೆಹಲಿ ಪ್ರಮುಖರಾದ ಡಾ. ಬಿ. ಮನೋಜಕುಮಾರ, ಎಂ.ಪಿ. ಚಂದ್ರಶೇಖರ, ಶಿವಪ್ಪ ಎಂ., ರಾಜಶೇಖರ ಪಾಟೀಲ, ಕೃಷ್ಣರಾಜ ಕೆ.ಎನ್., ರಾಜಕುಮಾರ ನಿಲೂರು, ಪ್ರಭಾಕರ ಮಡ್ಡಿತೋಟ, ಅಶೋಕ ಹಣಮಸಾಗ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *