
ಯಲ್ಲಾಪುರ: ಪಟ್ಟಣದ ಕೆ.ಬಿ. ರಸ್ತೆಯ ಶ್ರೀ ಲಕ್ಷ್ಮೀನಾರಾಯಣ ವೆಂಕಟ್ರಮಣ ಮಠದಲ್ಲಿ ಸ್ವರ್ಣ ಜ್ಯುವೆಲರ್ಸ್ ವತಿಯಿಂದ ಆಯೋಜಿಸಿರುವ ಚಿನ್ನ ಮತ್ತು ವಜ್ರದ ಆಭರಣಗಳ ವಿಶೇಷ ಪ್ರದರ್ಶನ ಭಾನುವಾರ ಉದ್ಘಾಟನೆಗೊಂಡಿತು.
ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಬಾಲಕೃಷ್ಣ ನಾಯಕ್ ಅವರು ದೀಪ ಬೆಳಗಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ನಾಯಕ್, “ಯಲ್ಲಾಪುರದಂತಹ ಪಟ್ಟಣಗಳಲ್ಲಿ ಇಂತಹ ಆಭರಣಗಳ ಪ್ರದರ್ಶನ ಆಯೋಜಿಸುವುದರಿಂದ ಸ್ಥಳೀಯ ಗ್ರಾಹಕರಿಗೆ ವಿವಿಧ ವಿನ್ಯಾಸಗಳ ಚಿನ್ನ ಮತ್ತು ವಜ್ರದ ಆಭರಣಗಳನ್ನು ಒಂದೇ ಸೂರಿನಡಿ ವೀಕ್ಷಿಸಿ ಖರೀದಿಸಲು ಅನುಕೂಲವಾಗುತ್ತದೆ. ಇಂತಹ ಉದ್ಯಮ ಚಟುವಟಿಕೆಗಳು ಸ್ಥಳೀಯ ವ್ಯಾಪಾರಕ್ಕೂ ಉತ್ತೇಜನ ನೀಡುತ್ತವೆ. ಗ್ರಾಹಕರಿಗೆ ಗುಣಮಟ್ಟದ ಆಭರಣಗಳ ಜೊತೆಗೆ ಉತ್ತಮ ಸೇವೆ ದೊರೆಯಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ವರ್ಣ ಜ್ಯುವೆಲರ್ಸ್ ಮಾಲೀಕ ಅವಿನಾಶ್ ಗೋಪಾಲಕೃಷ್ಣ ನಾಯಕ್ ಗುಜ್ಜಾಡಿ, ಯಲ್ಲಾಪುರದ ರಾಮ್ ಸ್ಟೋರ್ನ ಮಾರುತಿ ನಾಯಕ್, ಹುಬ್ಬಳ್ಳಿಯ ವಿಭಾ ನಾಯಕ್ ಹಾಗೂ ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಅ. 11ರಿಂದ 14ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ವಿವಿಧ ವಿನ್ಯಾಸಗಳ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಆಭರಣಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ವಜ್ರಾಭರಣಗಳ ಖರೀದಿಗೆ ಪ್ರತಿ ಕ್ಯಾರೆಟ್ಗೆ ₹10,000 ರಿಯಾಯಿತಿ, ವಜ್ರಾಭರಣಗಳ ಮೇಕಿಂಗ್ ಚಾರ್ಜ್ನಲ್ಲಿ ಶೇ. 50ರಷ್ಟು ರಿಯಾಯಿತಿ ಹಾಗೂ ಚಿನ್ನಾಭರಣಗಳ ಖರೀದಿಗೆ ಪ್ರತಿ ಗ್ರಾಂಗೆ ₹600 ರಿಯಾಯಿತಿ ನೀಡಲಾಗುತ್ತಿದೆ. ಈ ವಿಶೇಷ ಕೊಡುಗೆಗಳಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ಆಭರಣ ಪ್ರಿಯರು ಪ್ರದರ್ಶನಕ್ಕೆ ಭೇಟಿ ನೀಡಿ ವಿಶೇಷ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.















Leave a Reply