ಬೀಜ ಬಿತ್ತಿ ಬೆಳೆಯಲು ನೀರು ಎಲ್ಲಿದೆ?: ಯಲ್ಲಾಪುರದಲ್ಲಿ ಸಿದ್ದ ಮೇವು ಪೂರೈಕೆಗೆ ಕಿಸಾನ್ ಸಂಘದ ಒತ್ತಾಯ

ಹಂಚಿಕೊಳ್ಳಿ

ಯಲ್ಲಾಪುರ :
ತಾಲೂಕಿನಲ್ಲಿ ಅತೀವ ಬರಗಾಲ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ದನಕರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿರುವುದರಿಂದ, ರೈತರಿಗೆ ಮೇವು ಪೂರೈಸಬೇಕು ಎಂದು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು, ಪಶುಸಂಗೋಪನಾ ಇಲಾಖೆಯ ವತಿಯಿಂದ ಮೇವಿನ ಬೀಜ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ದನಗಳನ್ನು ಸಾಕುವುದು ಮತ್ತು ಅವುಗಳಿಗ ಅಗತ್ಯವಾದ ಮೇವನ್ನು ಒದಗಿಸುವುದು ರೈತರಿಗೆ ಕಷ್ಟಕರವಾಗಿದೆ.ಮೇವಿನ ಬೀಜ ವಿತರಿಸುವ ಬದಲು ಸಿದ್ದ ಮೇವನ್ನು ಪೂರೈಸಿದರೆ ರೈತರಿಗೆ ತಕ್ಷಣದ ಅನುಕೂಲವಾಗಲಿದೆ. ಮೇವಿನ ಬೀಜವನ್ನು ಬಳಸಿ ಮೇವನ್ನು ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ತುಂಬಾ ಕಷ್ಟವಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ ರಾ ಭಟ್ಟ ಬಾಳೆಗದ್ದೆ,ಪ್ರಮುಖರಾದ ಹರಿಪ್ರಕಾಶ್ ಕೋಣೆಮನೆ, ಪ್ರಸಾದ ಹೆಗಡೆ, ಸುಬ್ಬಣ್ಣ ಉದ್ದಾಬೈಲು, ರಾಘವೇಂದ್ರ ಭಟ್ ಹಾಸಣಗಿ, ಭಾಸ್ಕರ ಸಿದ್ದಿ,ನಾರಾಯಣ ಭಟ್ಟ ಜೂಜನಬೈಲ್, ಶ್ರೀನಿವಾಸ ಗಾಂವ್ಕಾರ್,ಮಹೇಶ ಗಾಂವ್ಕಾರ್ ಭಾಗಿನಕಟ್,ರಘುಪತಿ ಕಂಪ್ಲಿ, ರಾಮಚಂದ್ರ ಹಂಗಾರಿಮನೆ, ಸೇರಿದಂತೆ ರೈತರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *