ಶ್ರೀಗಂಧದ ಅಕ್ರಮ ಕಡಿತ: ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ, ನಾಲ್ವರು  ಆರೋಪಿಗಳು ಖೆಡ್ಡಾಕ್ಕೆ!

ಹಂಚಿಕೊಳ್ಳಿ

ಶಿರಸಿ: ಅಕ್ರಮವಾಗಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಉಂಬಳೇಕೊಪ್ಪದ ಸಂತೋಷ ಸಣ್ಯಾ ನಾಯ್ಕ (35), ನವೀನ ಚಂದ್ರಶೇಖರ ದೇವಡಿಗ (30), ಸಹಸ್ರಳ್ಳಿಯ ಮಂಜುನಾಥ ಮಾದೇವ ಗೌಡ (39) ಹಾಗೂ ಮುಂಡಿಗೆಹಳ್ಳಿಯ ಜನಾರ್ಧನ ಗಣಪತಿ ಗೌಡ (29) ಬಂಧಿತರು.

ತಾಲೂಕಿನ ಗೋಳಿಕಟ್ಟಾ ಗ್ರಾಮದ ಅರಣ್ಯ ಸರ್ವೇ ನಂ.20ರಲ್ಲಿ ಶ್ರೀಗಂಧ ಮರಗಳ ಅಕ್ರಮ ಕಡಿತ ನಡೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಏಳು ಶ್ರೀಗಂಧದ ಬುಡಚಿಗಳು ಹಾಗೂ 21 ನಗಗಳು ಪತ್ತೆಯಾಗಿವೆ.

ಸ್ಥಳದಿಂದ ಹಸಿ ಸಿಪ್ಪೆ ಸಹಿತ ಒಟ್ಟು 50.010 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಪ್ರೇಮಕುಮಾರ ಕಾರಭಾರಿ, ಗಸ್ತು ಅರಣ್ಯ ಪಾಲಕರಾದ ಸಂತೋಷ ಕಕ್ಕಳಮೇಲಿ, ರವಿ ಜಾಡರ, ಬಸನಗೌಡ ಹಾಲಗಿ ಹಾಗೂ ಎಚ್.ಎಸ್. ಈಶ್ವರಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *