ಶಿರಸಿ: ವಿನೂತನ ಮಾದರಿಯ ಮಳೆ ನೀರು ಕೊಯ್ಲು ಘಟಕವನ್ನು ಅಳವಡಿಸಿದ್ದಕ್ಕಾಗಿ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಮೋಹನ್ ಚಂದ್ರಗುತ್ತಿ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಇವರಿಗೆ ಸನ್ಮಾನಿಸಿ ಅಭಿನಂದಿಸಿದರು.
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಆವರಣದ ನೂತನ ಕಟ್ಟಡಗಳ ಐವತ್ತು ಸಾವಿರ ಚದರ ಅಡಿ ಮೇಲ್ಛಾವಣಿಗೆ ಬೆಂಗಳೂರಿನ ಪ್ರತಿಷ್ಠಿತ ಗೋಕಲ್ ದಾಸ್ ಎಕ್ಸ್ಪೋರ್ಟ್ಸ್ ಫೌಂಡೇಶನ್ ಸಿ.ಎಸ್.ಆರ್ ಕಾರ್ಯಕ್ರಮದ ಅಡಿಯಲ್ಲಿ ಮಳೆನೀರು ಕೊಯ್ಲು, ಕೊಳವೆ ಹಾಗೂ ತೆರೆದ ಬಾವಿಗಳ ಜಲ ಮರುಪೂರಣ ಘಟಕಗಳನ್ನು ವೈಜ್ಞಾನಿಕವಾಗಿ ಅಳವಡಿಸಿ ನೀರಿನ ಕೊರತೆಯನ್ನು ನೀಗಿಸುವಲ್ಲಿ ಉತ್ತಮ ಸೇವೆ ನೀಡಿದ ಕಾರಣಕ್ಕೆ ವಿಶ್ವವಿದ್ಯಾಲಯವು ಸ್ಕೊಡ್ವೆಸ್ ಸಂಸ್ಥೆಯ ಪರವಾಗಿ ಡಾ. ವೆಂಕಟೇಶ ನಾಯ್ಕ ಇವರಿಗೆ ಸನ್ಮಾನಿಸಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಗೋಕಲ್ ದಾಸ್ ಎಕ್ಸ್ಪೋರ್ಟ್ಸ್ ಫೌಂಡೇಶನ್ನ ಸಿಎಸ್.ಆರ್.ಒ, ಅಮಿತ್ ಶರ್ಮಾ, ಉಪಾಧ್ಯಕ್ಷ ಅಖಿಲ್ ಪಾಶಾ, ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೆಜರ್ ಮಹಾಂತೇಶ್ ಬಂಗಾರಿ, ಎಚ್. ಆರ್. ವಿಭಾಗದ ಎ.ವಿ.ಪಿ. ಗಿರೀಶ್ ಬಿ. ಆರ್, ಸಿ.ಎಸ್.ಆರ್. ಎಚ್. ಆರ್. ವಿಭಾಗದ ಮ್ಯಾನೆಜರ್ ರಾಜೇಂದ್ರ ಪ್ರಸಾದ್, ಎಚ್.ಆರ್ ಮೆನೇಜರ್ ಲಕ್ಷ್ಮೀ ನಾರಾಯಣ, ಎಚ್. ಆರ್. ಸತ್ಯಾ, ಜನರಲ್ ಮ್ಯಾನೇಜರ್ ಪ್ರಕಾಶ್, ತುಮಕೂರು ವಿಶ್ವ ವಿದ್ಯಾಲಯದ ಆರ್ಟ್ಸ ವಿಭಾಗದ ಡೀನ್ ಪರಶುರಾಮ್ ಕೆ.ವಿ., ಸೈನ್ಸ ವಿಭಾಗದ ಡೀನ್ ನಾಗಭೂಷಣ, ನಿರ್ದೇಶಕ ಡಾ. ಸುರೇಶ, ಹಿರಿಯ ಪ್ರಾಧ್ಯಾಪಕ ಕೇಶವ, ಸ್ಕೊಡ್ವೆಸ್ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಡಾ. ನಾರಾಯಣ ಹೆಗಡೆ ಉಪಸ್ಥಿತರಿದ್ದರು.
ವಿನೂತನ ಮಳೆ ನೀರು ಕೊಯ್ಲು ಘಟಕ ಅಳವಡಿಕೆ: ಡಾ. ವೆಂಕಟೇಶ ನಾಯ್ಕಗೆ ಸನ್ಮಾನ














Leave a Reply