ನಾಳೆಯಿಂದ ಮಳೆ ಮುಂದುವರೆಯುತ್ತಾ?  ನೋಡಿ ಹವಮಾನ ಮುನ್ಸೂಚನೆ….

ಹಂಚಿಕೊಳ್ಳಿ

22-7-2026 ಬುಧವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.

ಕರಾವಳಿಯ ಜಿಲ್ಲೆಗಳಲ್ಲಿ ನಿನ್ನೆ ಹಗಲು ಮಳೆ ಕಡಿಮೆಯಾಗಿತ್ತು. ಕಾಸರಗೋಡು ದ.ಕ. ಉಡುಪಿ ಉ.ಕ.ದ ಅಲ್ಲಲ್ಲಿ ರಾತ್ರಿ ಸಾಧಾರಣ ಮಳೆಯಾಗಿದೆ. ಮಲೆನಾಡು, ಒಳನಾಡಿನ ಅಲ್ಲಲ್ಲಿ ಸಾಮಾನ್ಯ ಮಳೆಯಾಗಿದ್ದು ಬೆಳಗಾವಿಯ ಖಾನಾಪುರ ತಾಲ್ಲೂಕಿನಲ್ಲಿ ರಾಜ್ಯದಲ್ಲಿಯೇ ಅಧಿಕ ಮಳೆಯಾಗಿದ್ದು ಕಲ್ಬುರ್ಗಿ ರಾಯಚೂರು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಹಗಲು ಉತ್ತಮ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದ ಮಳೆಯಾಗುತ್ತಿದ್ದು ಹಗಲು ಮೋಡ – ಮಳೆ ಮುಂದುವರೆಯಲಿದ್ದು ಆಗಾಗ ಸಾಧಾರಣ ಮಳೆಯಾಗಬಹುದು. ಕಾಸರಗೋಡು ಗಡಿಭಾಗಗಳಲ್ಲಿ ದ.ಕ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಉಡುಪಿ ಉ.ಕ ಕರಾವಳಿ ತೀರಗಳ ತಾಲ್ಲೂಕುಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ನಿರಂತರ ಭಾರೀ ಮಳೆಯ ಸಾಧ್ಯತೆ ಇಲ್ಲದಿದ್ದರೂ ಸಣ್ಣಸಣ್ಣ ಮೋಡಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ.

ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಸಾಗರ ಹೊಸನಗರ ತೀರ್ಥಹಳ್ಳಿ ಮೂಡಿಗೆರೆ ತಾಲ್ಲೂಕುಗಳ ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಮತ್ತು ಹಾಸನ ಕೊಡಗು ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು. ಘಟ್ಟಪ್ರದೇಶಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು.

ದಕ್ಷಿಣ ಒಳನಾಡಿನ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗಬಹುದು.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಬಿಜಾಪುರ ಕಲ್ಬುರ್ಗಿ ಬೀದರ್ ಜಿಲ್ಲೆಗಳ ಕೆಲವೆಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದೆ.

ಉತ್ತರ ಭಾರತದಾದ್ಯoತ ವಿವಿಧ ಸ್ಥರಗಳ ಗಾಳಿಯ ತಿರುಗುವಿಕೆಗಳ ಮುಂಗಾರು ಚುರುಕಾಗಿದ್ದು ಮುಂದಿನ 4-5 ದಿನ ಭಾರಿ ಮಳೆಯ ಮುನ್ಸೂಚನೆ ಇದೆ. ಮಹಾರಾಷ್ಟ್ರ ಕೊಂಕಣ ತೀರದಲ್ಲಿಯೂ ಇವತ್ತು ಭಾರಿ ಮಳೆಯ ಮುನ್ಸೂಚನೆ ಇದೆ. ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿಯೂ ಸಾಮಾನ್ಯ ಮುಂಗಾರು ಜುಲೈ ಕೊನೆ ತನಕ ಮುಂದುವರೆಯಲಿದೆ.

Leave a Reply

Your email address will not be published. Required fields are marked *