ಯಲ್ಲಾಪುರ: ತಾಲೂಕಿನ ಕಂಪ್ಲಿ ಪಂಚಾಯತ್ ವ್ಯಾಪ್ತಿಯ ಮಂಚಿಕೆರೆ ಗ್ರಾಮದ ನಿವಾಸಿ ಅಲೆಸ್ ಜುಜೆ ಲೊಫೀಸ್ ಎಂಬುವವರ ವಾಸ್ತವ್ಯದ ಮನೆಯ ಮೇಲೆ ಪಕ್ಕದ ಮನೆಯ ಶೌಚಾಲಯ ಕುಸಿದು ಬಿದ್ದ ಘಟನೆ ಇತ್ತೀಚೆಗೆ ನಡೆದಿದೆ.
ಶೌಚಾಲಯದ ಕಟ್ಟಡವು ಲೊಫೀಸ್ ಅವರ ಮನೆಯ ಮೇಲೆ ಬಿದ್ದ ರಭಸಕ್ಕೆ ವಾಸ್ತವ್ಯದ ಮನೆಯ ಮೇಲ್ಚಾವಣಿ ಹಾಗೂ ಗೋಡೆಗಳು ಭಾಗಶಃ ಹಾನಿಗೊಳಗಾಗಿವೆ. ಅದೃಷ್ಟವಶಾತ್ ಘಟನೆ ನಡೆದ ಸಂದರ್ಭದಲ್ಲಿ ಯಾವುದೇ ಜೀವಹಾನಿಯಾಗಲಿ ಅಥವಾ ಜಾನುವಾರುಗಳಿಗೆ ತೊಂದರೆಯಾಗಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಮಂಚಿಕೆರೆ ಕಂದಾಯ ನಿರೀಕ್ಷಕರು (ಆರ್.ಐ) ಹಾಗೂ ಮಂಚಿಕೆರೆ ಗ್ರಾಮ ಆಡಳಿತ ಅಧಿಕಾರಿಗಳು (ವಿ.ಎ) ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಯ ತೀವ್ರತೆಯನ್ನು ಅಳೆದಿರುವ ಅಧಿಕಾರಿಗಳು, ಸರ್ಕಾರದ ನಿಯಮಾವಳಿಗಳನ್ವಯ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.














Leave a Reply