ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ

ಹಂಚಿಕೊಳ್ಳಿ

ಬೆಂಗಳೂರು: ಚುನಾವಣಾ ಆಯೋಗದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಕ್ರಿಯವಾಗಿ ಭಾಗವಹಿಸಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಮತದಾರರ ಗುರುತಿನ ಚೀಟಿಯ ವಿವರಗಳನ್ನು ಪರಿಶೀಲಿಸಿಕೊಂಡರು.

ರಾಮನಗರ ಜಿಲ್ಲಾಧಿಕಾರಿ (DC), ಕನಕಪುರ ತಹಸೀಲ್ದಾರ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಸಿಎಂ ನಿವಾಸಕ್ಕೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ವೇಳೆ ಜಿಲ್ಲಾಧಿಕಾರಿಗಳಿಂದ ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿಯ ಕುರಿತು ಮುಖ್ಯಮಂತ್ರಿಗಳು ಸಂಪೂರ್ಣ ಮಾಹಿತಿ ಪಡೆದುಕೊಂಡರು.

ನನ್ನ ಫೋನ್‌ನಲ್ಲೇ ಹೇಳಿ ಕೊಡಿ ಎಂದ ಡಿStructure ಶಿವಕುಮಾರ್:

ಪರಿಶೀಲನೆ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಾವೇ ಸ್ವತಃ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಮುಂದಾದರು. ವೋಟರ್ ಲಿಸ್ಟ್ ಪರಿಶೀಲಿಸಿ, “ನನ್ನದು ಮತ್ತು ನನ್ನ ಹೆಂಡತಿಯ ಹೆಸರು ಲಿಸ್ಟ್‌ನಲ್ಲಿದೆ. ಇದರಲ್ಲಿ ಹೇಗೆ ಲಾಗಿನ್ ಮಾಡಬೇಕು ಎಂದು ಹೇಳಿ, ಡೌನ್‌ಲೋಡ್ ಮಾಡಿಕೊಡಿ” ಎಂದು ಅಧಿಕಾರಿಗಳನ್ನು ಕೇಳಿದರು. ಅಲ್ಲದೆ, “ನನ್ನ ಫೋನ್‌ನಲ್ಲೇ ತೋರಿಸಿ, ಇದನ್ನು ಹೇಗೆ ಬಳಸಬೇಕು?” ಎಂದು ಕುತೂಹಲದಿಂದ ವಿಚಾರಿಸಿದರು. ಅಧಿಕಾರಿಗಳು ಮುಖ್ಯಮಂತ್ರಿಗಳ ಮೊಬೈಲ್‌ನಲ್ಲೇ ಆ್ಯಪ್ ಡೌನ್‌ಲೋಡ್ ಮಾಡಿ ಪ್ರಕ್ರಿಯೆ ತೋರಿಸಿಕೊಟ್ಟರು.

ಆ್ಯಪ್ ಬಳಕೆಯಲ್ಲಿ ಕನ್ಫ್ಯೂಸ್ ಆಗುತ್ತೆ:

ಆ್ಯಪ್ ಕಾರ್ಯವೈಖರಿಯನ್ನು ಗಮನಿಸಿದ ಮುಖ್ಯಮಂತ್ರಿಗಳು, ತಂತ್ರಜ್ಞಾನದ ಬಳಕೆಯಲ್ಲಿ ಸಾಮಾನ್ಯ ಜನರಿಗೆ ಎದುರಾಗಬಹುದಾದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು. “ಮೊಬೈಲ್ ಫೋನ್‌ನಲ್ಲಿ ಈ ಆ್ಯಪ್ ಬಳಸುವುದು ಸಾಮಾನ್ಯ ಜನರಿಗೆ ಸ್ವಲ್ಪ ಸುಲಭವಾಗಿ ಅರ್ಥವಾಗಬೇಕು ರೀ. ಈಗಿರುವ ಪ್ರಕ್ರಿಯೆ ಸಾರ್ವಜನಿಕರಿಗೆ ಸ್ವಲ್ಪ ಕನ್‌ಫ್ಯೂಸ್ (ಗೊಂದಲ) ಸೃಷ್ಟಿಸುತ್ತದೆ” ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದರೆ ಪ್ರತಿಯೊಬ್ಬರಿಗೂ ತಮ್ಮ ಹೆಸರು ಪರಿಶೀಲಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.

Leave a Reply

Your email address will not be published. Required fields are marked *