ಬೆಂಗಳೂರು: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಬೆಸ್ಕಾಂ (BESCOM) ಕೇಂದ್ರ ಕಚೇರಿಯಿಂದ ಬಿಗ್ ಶಾಕ್ ನೀಡಲಾಗಿದ್ದು, ಜೂನ್ 10 ರಿಂದ ಜೂನ್ 30 ರವರೆಗೆ ಒಟ್ಟು 21 ದಿನಗಳ ಕಾಲ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಸ್ಕಾಂ ಇಲಾಖೆಯಲ್ಲಿ ತಾಂತ್ರಿಕ ಬದಲಾವಣೆ ಹಾಗೂ ಹೊಸ ಸಾಫ್ಟ್‌ವೇರ್ ಅಪ್‌ಗ್ರೇಡ್ (Software Upgrade) ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಕನೆಕ್ಷನ್, ಬಿಲ್ ಪಾವತಿ ಎಲ್ಲವೂ ಸ್ಥಗಿತ:

ಈ 21 ದಿನಗಳ ಅವಧಿಯಲ್ಲಿ ಡಿಜಿಟಲ್ ರೂಪದಲ್ಲಿ ದೊರೆಯುತ್ತಿದ್ದ ಎಲ್ಲಾ ರೀತಿಯ ಬೆಸ್ಕಾಂ ಸೇವೆಗಳು ಕ್ಲೋಸ್ ಆಗಲಿವೆ. ಆನ್‌ಲೈನ್ ಮೂಲಕ ಹೊಸ ವಿದ್ಯುತ್ ಕನೆಕ್ಷನ್‌ಗೆ ಅರ್ಜಿ ಸಲ್ಲಿಸುವುದು, ಮಾಸಿಕ ಕರೆಂಟ್ ಬಿಲ್ ಪಾವತಿ ಮಾಡುವುದು, ಹೆಸರು ಬದಲಾವಣೆ ಸೇರಿದಂತೆ ಪ್ರತಿಯೊಂದು ಆನ್‌ಲೈನ್ ಪ್ರಕ್ರಿಯೆಯೂ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಆನ್‌ಲೈನ್ ಸೇವೆ ಬಂದ್ ಆಗುವ 20 ಪಟ್ಟಣಗಳ ಲಿಸ್ಟ್:
ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ, ತುರುವೇಕೆರೆ ಮತ್ತು ಇನ್ನಿತರ ಆಯ್ದ ಪ್ರದೇಶಗಳಲ್ಲಿ ಈ ತಾಂತ್ರಿಕ ಅಡಚಣೆ ಇರಲಿದೆ.
ಬೆಸ್ಕಾಂ ವ್ಯವಸ್ಥೆಯನ್ನು ಮತ್ತಷ್ಟು ಕ್ರಾಂತಿಕಾರಿ ಹಾಗೂ ಗ್ರಾಹಕಸ್ನೇಹಿಯಾಗಿಸಲು ಈ ಸಾಫ್ಟ್‌ವೇರ್ ಅಪ್‌ಗ್ರೇಡೇಶನ್ ಅನಿವಾರ್ಯವಾಗಿದ್ದು, ಗ್ರಾಹಕರು ಈ 21 ದಿನಗಳ ಕಾಲ ಇಲಾಖೆಯೊಂದಿಗೆ ಸಹಕರಿಸಬೇಕು ಮತ್ತು ಬಿಲ್ ಪಾವತಿಗಾಗಿ ತಮ್ಮ ಹತ್ತಿರದ ಬೆಸ್ಕಾಂ ಕಚೇರಿಗಳು ಅಥವಾ ಕೌಂಟರ್‌ಗಳ ಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.


Leave a Reply