ಸರ್ಕಾರಿ ಬೋರ್ಡ್‌ಗಳಿಗೆ ಓಮಿನಿ ಕಾರಲ್ಲಿ ‘ಫ್ರೀ ರೈಡ್’ ಕೊಡ್ತಿದ್ದ ಕಳ್ಳರು; ಪ್ಲ್ಯಾನ್ ಫ್ಲಾಪ್ ಮಾಡಿ ‘ದಿಕ್ಕು’ ತಪ್ಪಿಸಿದ ಸಾರ್ವಜನಿಕರು!ಕಳ್ಳತನದ ವಿಡಿಯೋ ಸಹಿತ ವರದಿ

ಹಂಚಿಕೊಳ್ಳಿ

ಶಿರಸಿ: ಲೋಕೋಪಯೋಗಿ ಇಲಾಖೆಯು ಸಾರ್ವಜನಿಕ ಅನುಕೂಲಕ್ಕಾಗಿ ರಸ್ತೆಯ ಪಕ್ಕದಲ್ಲಿ ಅಳವಡಿಸಿದ್ದ ಸೂಚನಾ ಫಲಕ ಕಳ್ಳತನವಾದ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲೋಕೋಪಯೋಗಿ ಇಲಾಖೆಯು ಅಂದಳ್ಳಿ ರಸ್ತೆಯಿಂದ ಕಮಟಗೇರಿ ಕೂಡು ರಸ್ತೆ
ಮೂಲಕ ಕಡವೆ ಬೊಮ್ಮನಳ್ಳಿ ಮೂಲೆಮನೆ ರಸ್ತೆಯಲ್ಲಿ ಅಳವಡಿಸಿದ ಒಟ್ಟು 17,500 ರೂ.
ಮೌಲ್ಯದ 05 ಕಬ್ಬಿಣದ ಸೂಚನಾ ಫಲಕಗಳನ್ನು ಯಾರೋ ಕಳ್ಳರು ಕಳ್ಳತನ ಮಾಡುವ
ಉದ್ದೇಶದಿಂದ ಜು. 18 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಫಲಕಗಳನ್ನು ಅಳವಡಿಸಿದ ಸ್ಥಳದಿಂದ ಕಿತ್ತು ತೆಗೆದು ಅವುಗಳನ್ನು ಕೆಎ05/ಎಂ.ಬಿ-7407 ನಂಬರಿನ ಮಾರುತಿ ಓಮಿನಿ ವ್ಯಾನಿನಲ್ಲಿ ಹಾಕುತ್ತಿದ್ದಾಗ ಸಾರ್ವಜನಿಕರು ಅಲ್ಲಿಗೆ ಬಂದಿದ್ದನ್ನು ನೋಡಿ ಅಲ್ಲಿಂದ ವಾಹನ ಸಮೇತ ಪರಾರಿಯಾಗಿ ಹೋದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಂಭಿಯಂತರ ಅರುಣ.ಡಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *