ಶಿರಸಿ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ರಘುವೀರ ತಂದೆ ಗದಿಗೆಪ್ಪ ನಿಂಗಮ್ಮನವರ (32) ಬಂಧಿತ ವ್ಯಕ್ತಿ. ಈತ ನ್ಯಾಯಾಲಯದ ಮುದ್ದತ್ತಿಗೆ ಹಾಜರಾಗದೆ ಕಳೆದ 06 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಬೆಂಗಳೂರಿನ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್.ಈ.ಸಿ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನರಸಿಂಹಲು.ಟಿ, ತನಿಖಾ ಪಿಎಸ್ಐ ನಾರಾಯಣ್ ರಾಥೋಡ್ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ತುಕಾರಾಮ ಬಣಕಾರ, ನಜೀರ್ ಸಾಬ್, ಚನ್ನಬಸಪ್ಪ, ಸದ್ದಾಂ ಹುಸೇನ, ಹನುಮಂತ ಮಾಕಾಪುರ, ರಾಮಯ್ಯ ಪೂಜಾರಿ, ಹನುಮಂತ ಕಬಾಡಿ, ಚೇತನ್, ಸಂತೋಷ ಭಾಗವಹಿಸಿದ್ದರು.








Leave a Reply