Belagavi | ಸಾಲ ತೀರಿಸುವಂತೆ ಗಂಡನ ಮನೆಯವರ ಕಿರುಕುಳ; 3 ವರ್ಷದ ಮಗನೊಂದಿಗೆ ತಾಯಿ ಆತ್ಮಹ*ತ್ಯೆ!

ಹಂಚಿಕೊಳ್ಳಿ

ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿಯಲ್ಲಿ ಅತ್ಯಂತ ದಾರುಣ ಹಾಗೂ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಗಂಡನ ಮನೆಯವರ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಮೂರು ವರ್ಷದ ಕಂದಮ್ಮನೊಂದಿಗೆ ನೇ*ಣಿಗೆ ಶರಣಾಗಿದ್ದಾಳೆ. ಪ್ರೇಮಾ ನಾಗೇಶ ತಳವಾರ (28) ಹಾಗೂ ಆಕೆಯ ಮಗ ಭುವನ್ (3) ಮೃ*ತ ದುರ್ದೈವಿಗಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಈ ಕೃತ್ಯಕ್ಕೆ ಶರಣಾಗಿದ್ದಾರೆ.

ಕಿರುಕುಳಕ್ಕೆ ಕಾರಣವೇನು? ಗಂಡನ ಮನೆಯವರು ಮಾಡಿದ್ದ ಸಾಲವನ್ನು ತುಂಬುವಂತೆ ಪ್ರೇಮಾಳ ಮೇಲೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅತ್ತೆ, ಗಂಡ, ಮೈದುನ ಹಾಗೂ ನಾದಿನಿ ಸೇರಿ ಒಟ್ಟು 6 ಜನರು ಸೇರಿಕೊಂಡು ಈ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಪ್ರೇಮಾ, ಬೇಸತ್ತು ತನ್ನ ಮುದ್ದಾದ ಮಗನನ್ನೂ ಬಲಿತೆಗೆದುಕೊಂಡು ಸಾ*ವಿನ ಹಾದಿ ಹಿಡಿದಿದ್ದಾಳೆ.

ಆರು ಜನರ ವಿರುದ್ಧ ಪ್ರಕರಣ ದಾಖಲು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪ್ರೇಮಾಳ ತವರು ಮನೆಯವರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾ*ವಿಗೆ ಕಾರಣರಾದವರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃ*ತಳ ಕುಟುಂಬದ ದೂರಿನನ್ವಯ ಅತ್ತೆ ಸುಶೀಲಾ ತಳವಾರ, ಗಂಡ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ಹಾಗೂ ಇತರರಾದ ಸಂಗೀತಾ ತಳವಾರ, ಮರೇವ್ವಾ ತಳವಾರ ಮತ್ತು ಶಾರದಾ ಕಲಕಾಂವಕರ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸದ್ಯ ಮೃ*ತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds