ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶಿರಸಿ ವಿದ್ಯಾರ್ಥಿಗಳ ಸಾಧನೆ

ಹಂಚಿಕೊಳ್ಳಿ

ಶಿರಸಿ: ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ಅ.4ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶಿರಸಿ ಶೋ ಟೋಕನ್ ಕರಾಟೆ ಅಸೋಸಿಯೇಷನ್‌ನ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಶಿರಸಿಗೆ ಹೆಮ್ಮೆ ತಂದಿದ್ದಾರೆ.

ವಿದ್ಯಾರ್ಥಿಗಳಿಗೆ ಬಿ.ಎಸ್. ರಾಜೇಂದ್ರ ಹಾಗೂ ಪ್ರಕಾಶ್ ನಾಯಕ್ ತರಬೇತಿ ನೀಡಿದ್ದು, ಅವರ ಸಾಧನೆಯನ್ನು ಹಿರಿಯ ಶಿಕ್ಷಕ ಶಿಹಾನ್ ಬಿ.ಎಸ್. ಸೂರಜ್ ಶ್ಲಾಘಿಸಿದ್ದಾರೆ.

ವಿಜೇತ ವಿದ್ಯಾರ್ಥಿಗಳಾದ ವಿಶ್ರುತ್ ಜೆ.ಎಚ್., ಶ್ರೀವತ್ಸ ಹೆಗಡೆ, ಅಮೃತೇಶ್ ಎನ್. ಭಟ್, ಅವನಿ ವಿ. ಹೆಗಡೆ, ಚಿರಾಗ್ ಜಿ. ಪ್ರಭು, ಶ್ರೀವತ್ಸ, ಸಾನ್ವಿ ಎಚ್. ಹೆಗಡೆ, ಶ್ರೀಹರಿ ಹೆಗಡೆ, ವೈಷ್ಣವಿ ಜಿ.ಎಚ್., ಅಧಿಶ್ರೀ ಹಾಗೂ ಕುಂದನಾ ಅವರ ಸಾಧನೆಗೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *