ನಂದೋಳ್ಳಿ ಸಹಕಾರಿ ಸಂಘದಲ್ಲಿ ಮುಂದುವರಿದ ಹಳೇ ಸಾರಥಿಗಳ ಪಾರುಪತ್ಯ: ಅವಿರೋಧವಾಗಿ ಆಯ್ಕೆಯಾದ ಭಾಗ್ವತ-ಭಟ್ರಕೇರಿ ಜೋಡಿ!

ಹಂಚಿಕೊಳ್ಳಿ

ಯಲ್ಲಾಪುರ : ನಂದೋಳ್ಳಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಎರಡನೇ ಅವಧಿಗೆ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.

ಸಂಘದ ಅಧ್ಯಕ್ಷರಾಗಿ ಶ್ರೀ ತಿಮ್ಮಣ್ಣ ವಿ. ಭಾಗ್ವತ ಅವರು ಎರಡನೇ ಬಾರಿಗೆ ಆಯ್ಕೆಯಾದರೆ, ಶ್ರೀ ನಾರಾಯಣ ಭಟ್ಟ ಭಟ್ರಕೇರಿ ಅವರು ಉಪಾಧ್ಯಕ್ಷರಾಗಿ ಮುಂದುವರಿದರು. ಸಂಘದ ನಿರ್ದೇಶಕರ ಒಮ್ಮತದ ಅಭ್ಯರ್ಥಿಗಳಾಗಿ ಇವರಿಬ್ಬರೂ ಚುನಾವಣಾಧಿಕಾರಿ ಭಾಸ್ಕರ್ ನಾಯ್ಕ್ ಅವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕ ಎಂ.ಆರ್. ಭಟ್ಟ ಹಾಗೂ ಯು.ಕೆ. ಬ್ಯಾಂಕ್ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ ಅವರು ಮಾತನಾಡಿ, ಸಂಘದ ಪ್ರಸ್ತುತ ಸ್ಥಿತಿಗತಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮರು ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮಾತನಾಡಿ, ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಪ್ರಗತಿಗೆ ನಿರಂತರ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಅವರಿಗೂ ಧನ್ಯವಾದ ಅರ್ಪಿಸಿದರು.

ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಯು.ಕೆ. ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ, ಸಿವಿಲ್ ಗುತ್ತಿಗೆದಾರ ಗಜಾನನ ಭಟ್ಟ ಕುಂಕಿ, ತಿಮ್ಮಣ್ಣ ಎಸ್. ಭಟ್ಟ ತಟ್ಟಿಗದ್ದೆ, ನಾಗೇಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ನೂತನ ಆಡಳಿತ ಮಂಡಳಿ ಹಾಗೂ ಅಧ್ಯಕ್ಷ–ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ್ ಹೆಗಡೆ ಸ್ವಾಗತಿಸಿದರು. ನಾರಾಯಣ ಭಟ್ಟ ಭಟ್ರಕೇರಿ ವಂದನಾರ್ಪಣೆ ನೆರವೇರಿಸಿದರು.

Leave a Reply

Your email address will not be published. Required fields are marked *