ಎಷ್ಟೇ ಕುಗ್ಗಿಸಲು ಪ್ರಯತ್ನಿಸಿದರು ಜನಸೇವೆಯಿಂದ ಹಿಂದೆ ಸರಿಯಲ್ಲ: ಬಿಜೆಪಿಯ ಪಕ್ಷ ಸಂಘಟನೆಯೇ ನನ್ನ ಉದ್ದೇಶ” — ಬಾಲು ನಾಯಕ್

ಹಂಚಿಕೊಳ್ಳಿ

ಯಲ್ಲಾಪುರ: ಸ್ಥಳಿಯ ಸಂಸ್ಥೆಯೊಂದರದ್ದು ಎನ್ನುವ ವಿವಾದಿತ ಜಾಗದ ವಿಚಾರ ಪ್ರಸ್ತಾಪವಾದ ತಕ್ಷಣ ಅದಕ್ಕೆ ಯಾವುದೇ ಸಂಬಂಧವಿಲ್ಲದ ತಮ್ಮ ಹೆಸರನ್ನು ಎಳೆದು ತರುವುದು ಬೇಸರದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಬಾಲು ನಾಯಕ್ ಹೇಳಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ತಮ್ಮನ್ನು ಎದುರಿಸಲು ಸಾಧ್ಯವಾಗದವರು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಹೇಳಿದರು.

“ವಿವಾದಿತ ಜಾಗ ಎಂದು ಹೇಳಿಕೊಳ್ಳುತ್ತಿರುವ ಜಾಗಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ರಾಜಕೀಯವಾಗಿ ನನ್ನನ್ನು ಕುಗ್ಗಿಸುವ ಉದ್ದೇಶದಿಂದ ಇಂತಹ ಚರ್ಚೆಗಳನ್ನು ಸೃಷ್ಟಿಸಲಾಗುತ್ತಿದೆ. ಈ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿಯೇ ಉತ್ತರ ನೀಡುತ್ತೇನೆ,” ಎಂದು ಬಾಲು ನಾಯಕ್ ಹೇಳಿದರು.

ವಿರೋಧಿಗಳು ಎಷ್ಟೇ ರೀತಿಯಲ್ಲಿ ತಮ್ಮನ್ನು ಕುಗ್ಗಿಸಲು ಪ್ರಯತ್ನಿಸಿದರೂ ಜನರ ಸೇವೆಯಿಂದ ಹಿಂದೆ ಸರಿಯುವುದಿಲ್ಲ. ತಮ್ಮ ಹೆಸರನ್ನು ಕೆಡಿಸಲು ಎಷ್ಟೇ ಪ್ರಯತ್ನಗಳು ನಡೆದರೂ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

“ಬಿಜೆಪಿಯ ಪಕ್ಷ ಸಂಘಟನೆಯೇ ನನ್ನ ಉದ್ದೇಶ. ಜನರ ಸೇವೆ ಹಾಗೂ ಪಕ್ಷ ಸಂಘಟನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಎಷ್ಟೇ ಕುಗ್ಗಿಸಲು ಪ್ರಯತ್ನಿಸಿದರೂ ಜನರೊಂದಿಗೆ ಇರುವ ನನ್ನ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ,” ಎಂದು ಬಾಲು ನಾಯಕ್ ತಿಳಿಸಿದರು.

Leave a Reply

Your email address will not be published. Required fields are marked *