ಯಲ್ಲಾಪುರದಲ್ಲಿ ವನ್ಯಜೀವಿ ಬೇಟೆಯಾಡಿ ದಾಸ್ತಾನು ಆರೋಪ : ಇಬ್ಬರ ಬಂಧನ!!!!

ಹಂಚಿಕೊಳ್ಳಿ

ಯಲ್ಲಾಪುರ: ಯಲ್ಲಾಪುರ ವಲಯ ವ್ಯಾಪ್ತಿಯ ಹಳಬೈಲ್ ಶಾಖೆಯ ಅರಳಿಕೊಪ್ಪ ಗಸ್ತು ಬ್ಲಾಕ್‌ನ ಕಣ್ಣಿಗೇರಿ ಗ್ರಾಮದ ಹಳಿಯಾಳ ಕ್ರಾಸ್ ಅರಣ್ಯ ಪ್ರದೇಶದ ಸಮೀಪದ ಮನೆಯಲ್ಲಿ ವನ್ಯಜೀವಿ ಬೇಟೆಯಾಡಿ ದಾಸ್ತಾನು ಮಾಡಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇನಾಸ್ ಬಸ್ಥ್ಯಾಂವ್ ಸಿದ್ದಿ (55) ಹಾಗೂ ಪ್ರಕಾಶ್ ಇನಾಸ್ ಸಿದ್ದಿ (27) ಅವರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ Bengal Monitor Lizard (Varanus bengalensis) ಜಾತಿಯ ಮೃತಪಟ್ಟ ಎರಡು ಗಂಡು ಉಡಗಳು, ಬೇಟೆಗೆ ಬಳಸಿದ್ದ ಎರಡು ಕತ್ತಿಗಳು ಹಾಗೂ ಒಂದು ಕೊಡಲಿ ಪತ್ತೆಯಾಗಿದ್ದು, ಅವುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸೆಕ್ಷನ್ 2(16), 9, 39(a) ಹಾಗೂ 50ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅವರ ನೇತೃತ್ವದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎಚ್. ನಾಯ್ಕ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಷ್ ಗಾಂವ್ಕರ್, ಶ್ರೀನಿವಾಸ್ ನಾಯ್ಕ, ಶ್ರೀಧರ್ ಸಜ್ಜನ್, ಶರಣಬಸು ದೇವರ, ಪ್ರಭಾಕರ ಬಗಲಿ, ಮಂಜುನಾಥ್ ಗರ್ಭಗುಡಿ, ದರ್ಶನ್ ವಿ.ಎಸ್.ಗಸ್ತು ಅರಣ್ಯ ಪಾಲಕರಾದ ಶ್ರೀ ಸತೀಶ ಕುಂಬಾರ, ಬಸವರೆಡ್ಡಿ , ರಾಮು ಕೊಕ್ಕರೆ, ಶಾನವಾಜ ಮುಲ್ತಾನಿ, ಗೌಡಪ್ಪ  ಸುಳ್ಳದ, ರಮೇಶ್ ಬಡಿಗೇರ್, ಲಕ್ಷ್ಮಣ ಪಮ್ಮಾರ್, ಪ್ರಶಾಂತ್ ತಳವಾರ್, ವಾಹನ ಚಾಲಕರಾದ ಮಂಜುನಾಥ, ಪ್ರಶಾಂತ  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *