CM ಸಚಿವಾಲಯದಲ್ಲಿ ಹೊಸ ಸಂಪ್ರದಾಯ: ಒಬ್ಬರಲ್ಲ, ಇಬ್ಬರಲ್ಲ… ಈ ಬಾರಿ ಮೂವರು ಮಾಧ್ಯಮ ಕಾರ್ಯದರ್ಶಿಗಳ ನೇಮಕ!

ಹಂಚಿಕೊಳ್ಳಿ

ಬೆಂಗಳೂರು: ಸಾಮಾನ್ಯವಾಗಿ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಒಬ್ಬರೇ ಮಾಧ್ಯಮ ಸಲಹೆಗಾರರು (Media Advisor) ಅಥವಾ ಮಾಧ್ಯಮ ಸಂಯೋಜಕರು ಇರುವುದು ದಶಕಗಳಿಂದ ನಡೆದುಬಂದಿರುವ ಸಂಪ್ರದಾಯ. ಆದರೆ, ಈ ಬಾರಿ ಕರ್ನಾಟಕ ಸರ್ಕಾರವು ಆಡಳಿತ ಹಾಗೂ ಮಾಧ್ಯಮ ಸಂವಹನ ಕ್ಷೇತ್ರದಲ್ಲಿ ಒಂದು ಹೊಸ ಮತ್ತು ಅಪರೂಪದ ಪ್ರಯೋಗಕ್ಕೆ ನಾಂದಿ ಹಾಡಿದೆ. 

ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಒಟ್ಟಿಗೆ ಮೂವರು ಹಿರಿಯ ಪತ್ರಕರ್ತರನ್ನು ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಿಸುವ ಮೂಲಕ ಅಚ್ಚರಿಯ ಮತ್ತು ವಿಶೇಷ ನಿರ್ಧಾರ ಕೈಗೊಳ್ಳಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಹಿರಿಯ ಪತ್ರಕರ್ತರಾದ ಪಿ. ತ್ಯಾಗರಾಜ್ (ಮಾಧ್ಯಮ ಕಾರ್ಯದರ್ಶಿ-1), ಆರ್. ಜಯಪ್ರಕಾಶ್ (ಮಾಧ್ಯಮ ಕಾರ್ಯದರ್ಶಿ-2) ಮತ್ತು ರಾಘವೇಂದ್ರ ಭಟ್ (ಮಾಧ್ಯಮ ಕಾರ್ಯದರ್ಶಿ-3) ಅವರನ್ನು ಶ್ರೇಣೀಕೃತ ಹುದ್ದೆಗಳಿಗೆ ನಿಯೋಜಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ (ಸಿಆಸುಇ) ಗಾಯತ್ರಿ ಜಿ. ಎನ್. ಅವರು ಈ ಆದೇಶಕ್ಕೆ ಡಿಜಿಟಲ್ ಸಹಿ ಹಾಕಿದ್ದಾರೆ. ತಕ್ಷಣದ ಅನುಷ್ಠಾನಕ್ಕಾಗಿ ಈ ಆದೇಶದ ಪ್ರತಿಗಳನ್ನು ಕರ್ನಾಟಕದ ಪ್ರಧಾನ ಮಹಾಲೇಖಪಾಲರು ಹಾಗೂ ವಿಧಾನ ಸೌಧದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಆಡಳಿತಾತ್ಮಕ ಕಚೇರಿಗಳಿಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

Advertisement


This will close in 3 seconds