ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ನಿನ್ನೆ (ಭಾನುವಾರ) ಕೇವಲ 1449 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ, ಇಂದು 4291 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟದ ವಿವರ:

| ವಿವರ | ಪ್ರಮಾಣ |
| ಗರಿಷ್ಠ ಮಟ್ಟ | 124.80 ಅಡಿಗಳು |
| ಇಂದಿನ ಮಟ್ಟ | 81.55 ಅಡಿಗಳು |
| ಒಳಹರಿವು | 4291 ಕ್ಯೂಸೆಕ್ |
| ಹೊರಹರಿವು | 764 ಕ್ಯೂಸೆಕ್ |
| ಗರಿಷ್ಠ ಸಂಗ್ರಹ ಸಾಮರ್ಥ್ಯ | 49.452 ಟಿಎಂಸಿ |
| ಇಂದಿನ ನೀರಿನ ಸಂಗ್ರಹ | 11.487 ಟಿಎಂಸಿ |
ಹಾರಂಗಿ ಜಲಾಶಯದ ಇಂದಿನ ಮಟ್ಟ
ಇನ್ನೊಂದೆಡೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೂ ನೀರಿನ ಒಳಹರಿವು ಮುಂದುವರಿದಿದೆ.
ಹಾರಂಗಿ ಡ್ಯಾಂನ ಇಂದಿನ ನೀರಿನ ಮಟ್ಟದ ವಿವರ:
| ವಿವರ | ಪ್ರಮಾಣ |
| ಗರಿಷ್ಠ ಮಟ್ಟ | 2859.00 ಅಡಿಗಳು |
| ಇಂದಿನ ಮಟ್ಟ | 2835.92 ಅಡಿಗಳು |
| ಒಳಹರಿವು | 1344 ಕ್ಯೂಸೆಕ್ |
| ಹೊರಹರಿವು | 180 ಕ್ಯೂಸೆಕ್ |
| ಗರಿಷ್ಠ ಸಂಗ್ರಹ ಸಾಮರ್ಥ್ಯ | 8.5 ಟಿಎಂಸಿ |
| ಇಂದಿನ ನೀರಿನ ಸಂಗ್ರಹ | 5.688 ಟಿಎಂಸಿ |


Leave a Reply