ರೆಸ್ಟೋರೆಂಟ್‌ನಲ್ಲಿ ಭೀಕರ ಅಗ್ನಿ ದುರಂತ; ವಿದೇಶಿಯರು ಸೇರಿದಂತೆ 21 ಜನರ ದುರ್ಮರಣ!!

ಹಂಚಿಕೊಳ್ಳಿ

ನವದೆಹಲಿ: ದೇಶದ ರಾಜಧಾನಿಯಾದ ದಕ್ಷಿಣ ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶವಾದ ಮಾಳ್ವಿಯಾ ನಗರದಲ್ಲಿ (Malaviya Nagar) ಇಂದು ಬೆಳಗ್ಗೆ ಕಣ್ಣೀರು ತರಿಸುವ ಘಟನೆಯೊಂದು ನಡೆದಿದೆ. ಇಲ್ಲಿನ ಪ್ರಸಿದ್ಧ ರೆಸ್ಟೋರೆಂಟ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 21 ಮಂದಿ ಜೀವಂತವಾಗಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಇಂದು ಜೂನ್ 3ರ ಬುಧವಾರ ಬೆಳಗ್ಗೆ ಸುಮಾರು 8:50ರ ವೇಳೆಗೆ ಜನರು ಉಪಾಹಾರ ಸೇವಿಸುತ್ತಿದ್ದ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ಕೆಲಸದಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ರೆಸ್ಟೋರೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ಕಟ್ಟಡವನ್ನು ದಟ್ಟವಾದ ಹೊಗೆ ಹಾಗೂ ಕೆನ್ನಾಲಿಗೆ ಚಾಚಿದ ಬೆಂಕಿಯ ಜ್ವಾಲೆಗಳು ಆವರಿಸಿಕೊಂಡಿವೆ. ಒಳಗಿದ್ದವರಿಗೆ ಹೊರಬರಲು ದಾರಿ ಸಿಗದೆ ಇಡೀ ಆವರಣ ನರಕಸದೃಶ್ಯವಾಗಿ ಮಾರ್ಪಟ್ಟಿತ್ತು.

ರೆಸ್ಟೋರೆಂಟ್‌ನಿಂದ ಭಾರಿ ಪ್ರಮಾಣದಲ್ಲಿ ಹೊಗೆ ಮತ್ತು ಕಿರುಚಾಟ ಕೇಳಿಬರುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಆತಂಕಗೊಂಡು ಅಗ್ನಿಶಾಮಕ ದಳಕ್ಕೆ ತುರ್ತು ಕರೆ ಮಾಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಅಗ್ನಿಶಾಮಕ ವಾಹನಗಳು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ. ಸದ್ಯ ಸಿಬ್ಬಂದಿಗಳು ಧಗಧಗಿಸುತ್ತಿರುವ ಬೆಂಕಿಯ ಜ್ವಾಲೆಗಳ ನಡುವೆಯೇ ಸಾಹಸಿಕವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ದುರದೃಷ್ಟವಶಾತ್, ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಹಾಗೂ ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ರೆಸ್ಟೋರೆಂಟ್ ಒಳಗಿದ್ದ ವಿದೇಶಿ ಪ್ರಜೆಗಳು ಸೇರಿದಂತೆ 21 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದ್ದು, ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ದುರಂತ ಸಂಭವಿಸಿದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds