ಜೀವವೈವಿಧ್ಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಿ: ಜಗದೀಶ ವಡ್ನಾಳ ಕರೆ

ಹಂಚಿಕೊಳ್ಳಿ
ಮಾವಿನಮನೆ ಸೇವಾ ಸಹಕಾರಿ ಸಂಘ ಮಲವಳ್ಳಿ

ಯಲ್ಲಾಪುರ: ಜೀವವೈವಿಧ್ಯ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬ ಸದಸ್ಯರೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು.ಈ ಮಂಡಳಿ ನಿಮ್ಮೊಂದಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಜಗದೀಶ ವಡ್ನಾಳ ಹೇಳಿದರು.

ಅವರು ಸೋಮವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ನೂತನ ಸದಸ್ಯರ ಸ್ವಾಗತ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪರೂಪದ ಸಸ್ಯ ಪ್ರಬೇಧಗಳು, ಔಷಧೀಯ ಸಸ್ಯಗಳ ಕುರಿತು ದಾಖಲೀಕರಣ ಆಗಬೇಕು. ಅವುಗಳ ಸುಸ್ಥಿರ ಬಳಕೆ, ಸಂರಕ್ಷಣೆಗೆ ಆದ್ಯತೆ ನೀಡಬೇಕು. ಜತೆಗೆ ಅಂತಹ ಗಿಡ-ಮರಗಳನ್ನು ಹೊಸದಾಗಿ ಬೆಳೆಸುವ ಕಾರ್ಯವೂ ಈ ಸಮಿತಿಗಳ ಮೂಲಕ ಆಗಬೇಕು ಎಂದ ಅವರು, ಅಭಿವೃಧ್ದಿ ಯೊಂದೇ ಮುಖ್ಯವಾಗಬಾರದು.ನಮಗೆ ಮುಖ್ಯವಾಗಿ ಸದುದ್ದ ಗಾಳಿ ನೀರು ಬೇಕು.ಮುಂದಿನ ಪೀಳಿಗೆಗೆ ಶುದ್ಧ ಪರಿಸರವನ್ನು ನೀಡಿ ಹೋಗಬೇಕಾದ ಹೊಣೆಗಾರಿಕೆ ನಮ್ಮ ನಿಮ್ಮ ಮೇಲಿದೆ.ಆ ಪ್ರಯತ್ನವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು ಎಂದ ಅವರು
ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸಮಿತಿಗಳು ಕೇವಲ ಭಾಷಣಕ್ಕೆ, ಸಭೆಗೆ ಸೀಮಿತವಾಗಬಾರದು. ಉದ್ದೇಶಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಾರ್ಥಕತೆ ಬರುತ್ತದೆ.ಸಮಿತಿ ಗಳು ಕಾಲ ಕಾಲಕ್ಕೆ ಸಭೆ ಸೇರಿ ಆಗಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಬೇಕು.ಈ ತಾಲೂಕಿನಲ್ಲಿ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಇದೆ.ನಿವು ಮಾದರಿಯಾಗಿ ಮಾಡಿ ಇತರರಿಗೆ ಮಾಸರಿಯಾದಾಗ ಮಾತ್ರ ನಿಮ್ಮ ಕಾರ್ಯ ಮತ್ತು ಶೃಮ ಸಾರ್ಥಕ ಎಂದರು.

ಮಾವಿನಮನೆ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಪ್ರಯುಕ್ತ ಯಕ್ಷಗಾನ


ಮಂಡಳಿಯ ಹಿರಿಯ ಅಧಿಕಾರಿ ಪವಿತ್ರಾ,ಅಧಿಕಾರಿಗಳಾದ ಪ್ರಸನ್ನ, ಪ್ರೀತಮ್, ಎಸಿಎಫ್ ಹಿಮವತಿ ಭಟ್ಟ, ತಾ.ಪಂ ಯೋಜನಾಧಿಕಾರಿ ರಾಘವ, ಮಂಜುನಾಥ ಆಗೇರ ಉಪಸ್ಥಿತರಿದ್ದರು.
ತಾಲೂಕು ಸಮಿತಿಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.ಪಶ್ಚಿಮ ಘಟ್ಟದ ಜೀವ ವೈವಿಧ್ಯ ಅರಣ್ಯ ಪರಿಸರ ಅಧ್ಯಯನಗಳ ಕುರಿತು ನಡೆದ ಕಾರ್ಯಗಾರದ ಮಾಹಿತಿಯ ಪುಸ್ತಕ ಹಾಗೂ ತಾಲೂಕಿನ ನಾಟಿ ವೈದ್ಯರ ವಿವರಗಳನ್ನೊಳಗೊಂಡ ಕೈಪಿಡಿಯನ್ನು ರಾಜ್ಯಾಧ್ಯಕ್ಷರು ಬಿಡುಗಡೆಗೊಳಿಸಿದರು.
ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಮಿತಿಯ ಸದಸ್ಯರಾದ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕಗೈದು ಮುಂದಿನ ಕಾರ್ಯಯೋಜನೆ ಹೆಜ್ಜೆಗಳ ಬಗ್ಗೆ ವಿವರಿಸಿದರು. ಇಓ ರಾಜೇಶ ಧನವಾಡಕರ್ ಸ್ವಾಗತಿಸಿದರು.
ಸದಸ್ಯ ‌ಕೆ.ಎಸ್ ಭಟ್ಟ ಆನಗೋಡ ನಿರ್ವಹಿಸಿದರು.ಪ್ರಗತಿ ಸಹಾಯಕ ಗಣಪತಿ ಭಾಗ್ವತ ವಂದಿಸಿದರು.
ತಾಲೂಕಾ ಜೀವವೈವಿಧದಯ ಸಮಿತಿ ಸದಸ್ಯರು ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತದ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರುಗಳು,ಆಡಳಿತಾಧಿಕಾರಿಗಳು,ಪಿಡಿಓ ಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *