ಸಾಕ್ಷ್ಯ ನಾಶಪಡಿಸಿ ಪರಾರಿಯಾಗಿದ್ದ ಶಾಣ್ಯಾ ಕೊನೆಗೂ ಖಾಕಿ ಬಲೆಗೆ: ಯಲ್ಲಾಪುರ ಪೊಲೀಸರ ಮುಂದೆ ಫೇಲ್ ಆಯ್ತು ಆರೋಪಿಯ ಪ್ಲ್ಯಾನ್!

ಹಂಚಿಕೊಳ್ಳಿ

ಯಲ್ಲಾಪುರ: ತಾಲುಕಿನ ಅರಬೈಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪರಿಚಿತ ಶವ ಅನುಮಾನಾಸ್ಪದವಾಗಿ ಮೃತ ಪಟ್ಟ   ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಲಾರ ಚಾಲಕನಾ ಆದ ಪ್ರಕಾಶ್ ಗಣಪತಿ ವಿಠ್ಠಲ ಕೊರವಿ (ವಾಸ: ಅಕ್ಕಲಕೋಟ್, ಮಹಾರಾಷ್ಟ್ರ) ಎಂಬಾತನನ್ನು ತನಿಖಾ ತಂಡ ಬಂಧಿಸಿದೆ.

ಘಟನೆಯ ವಿವರ:
ಕಳೆದ ಆಗಸ್ಟ್ 12 ಮತ್ತು 13ರ ಮಧ್ಯರಾತ್ರಿ ಅವಧಿಯಲ್ಲಿ ಈ ಕೊಲೆ ನಡೆದಿತ್ತು.ಆ ಸಂದರ್ಭದಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮೃತ ವ್ಯಕ್ತಿಯನ್ನು ಪತ್ತೆ ಮಾಡಿದ್ದು, ಮೃತ ವ್ಯಕ್ತಿ ಲಾರಿ ಚಾಲಕ ಆಕಾಶ ರಜಪೋತ ಎಂದು ಗುರುತಿಸಿದರು. ನಂತರ ಆರೋಪಿ ಪತ್ತೆ ಕೂಡಾ ಅಷ್ಟೆ ಕಷ್ಟವಾಗಿತ್ತು. ಯಲ್ಲಾಪುರ ಪೊಲೀಸರ ಬುದ್ದಿವಂತಿಕೆ ಹಾಗೂ ವಿವಿಧ ಆಯಾಮದಲ್ಲಿ ತನಿಖೆ ನಡೆಸಿ  ಆರೋಪಿ ಪ್ರಕಾಶ್ ಕೊರವಿ ಎಂಬುವವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರೆ. ನಂತರ ಕೊಲೆಗೆ ಕಾರಣವನ್ನು ಹುಡುಕಿದಾಗ ಆರೋಪಿ ಹಾಗೂ ಕೊಲೆಯಾದವನ ನಡುವೆ ಕ್ಷುಲ್ಲಕ ಕಾರಣಕ್ಕೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ಆರೋಪಿ ಪ್ರಕಾಶ್, ಕಬ್ಬಿಣದ ರಾಡ್‌ನಿಂದ ಆಕಾಶನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕಾಶ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೊಲೆಯ ಬಳಿಕ ಆರೋಪಿಯು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಹೆದ್ದಾರಿಯ ಪಕ್ಕದ ಗಿಡಗಂಟಿಗಳ ಮಧ್ಯೆ ಎಸೆದು ಪರಾರಿಯಾಗಿದ್ದನು.

ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿ ರವಿ ಕೃಷ್ಣ ಸಿದ್ದಿ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್   ಮಾರ್ಗದರ್ಶನದಲ್ಲಿ, ಶಿರಸಿ ಉಪವಿಭಾಗದ ಡಿವೈಎಸ್‌ಪಿ (DySP) ಶ್ರೀಮತಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅವರ ತಂತ್ರಜ್ಞಾನ ಆಧಾರಿತ ಚುರುಕಿನ ಕಾರ್ಯಾಚರಣೆಯಿಂದ ಆರೋಪಿಯ ಸುಳಿವು ಪತ್ತೆಯಾಯಿತು. ತನಿಖಾ ತಂಡವು ಆರೋಪಿ ಪ್ರಕಾಶ್‌ನನ್ನು ಆಗಸ್ಟ್ 17ರಂದು ಬಂಧಿಸಿ, ಕೊಲೆಗೆ ಬಳಸಿದ ವಾಹನ ಹಾಗೂ ಆಯುಧಗಳನ್ನು ವಶಪಡಿಸಿಕೊಂಡಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಯಲ್ಲಾಪುರ ಮುಂಡಗೋಡ ಪೊಲೀಸ್ ವೃತ್ತ ನಿರೀಕ್ಷಕ(CPI) ರಮೇಶ ಹಾನಾಪುರ,  ಯಲ್ಲಾಪುರ ಪೊಲೀಸ್ ಠಾಣೆಯ ಪಿ ಎಸ್ ಐ ಗಳಾದ ರಾಜಶೇಖರ ವಂದಲಿ, ಮಹಾವೀರ ಡಿ. ಕಂಬಾಳೆ, ಸಿದ್ದಪ್ಪ ಗುಡಿ ಹಾಗು ಸಿಬ್ಬಂದಿಗಳಾದ  ರಾಘವೇಂದ್ರ ಮೊಳೆ,  ಸಂತೋಷ ಬಾಲೇರ, ಬಸವರಾಜ ಡಿ.ಕೆ, ರಾಚಪ್ಪ ಧನಗರ, ಪ್ರವೀಣ ಪೂಜಾರ್, ಕೆ. ಹೆಚ್. ಮಾರುತಿ ಹಾಗೂ ವಿಶ್ವನಾಥ ಜಾಯನ್ ಗೌಡರ್ ಹಾಗೂ ತಾಂತ್ರಿಕ ವಿಭಾಗದ ಬಬನ್, ಉದಯ ಗುನಗಾ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

Leave a Reply

Your email address will not be published. Required fields are marked *