ಏಷ್ಯಾ ಫೆಸಿಫಿಕ್ ಯೋಗಕ್ಕೆ ಆಯ್ಕೆಯಾದ ನಂದನ್ ಭಟ್ ಗೆ ಅನಂತಮೂರ್ತಿ ಹೆಗಡೆ ವೈಯಕ್ತಿಕ ನೆರವು , ಪ್ರೋತ್ಸಾಹ

ಹಂಚಿಕೊಳ್ಳಿ

ಶಿರಸಿ: ನಂದನ ನರಸಿಂಹ ಭಟ್ ಆದ್ಮಾತ್ಮಿಕ ಯೋಗದಲ್ಲಿ ಉತ್ತಮವಾದ ಸಾಧನೆ ಮಾಡಿ, ಈಗ ಏಷ್ಯಾ ಫೆಸಿಫಿಕ್ ಯೋಗ ಕಾಂಪಿಟೇಶನ್‌ನಲ್ಲಿ ದೇಶವನ್ನು ಪ್ರತಿನಿಧಿಸುವಂತಹ ಅವಕಾಶ ಸಿಕ್ಕಿದೆ, ಜಿಲ್ಲೆಗೆ ಹೆಮ್ಮೆಯನ್ನು ತರುವಂತಹ ಕೆಲಸವನ್ನು ಮಾಡಿದ್ದಾನೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಆಯ್ಕೆಯಾದ ವಿದ್ಯಾರ್ಥಿಗೆ ತಮ್ಮ ವಯಕ್ತಿಕವಾದ ಸಹಾಯಧನವನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಈ ಯುವಕರು ಇದನ್ನೆಲ್ಲಾ ಸಾಧಿಸುತ್ತಿದ್ದಾರೆ ಅಂತಹ ಬಹಳ ಖುಷಿಯಾಗುತ್ತದೆ. ಕರ್ನಾಟಕದಲ್ಲಿ ಕೆಲವೆ ಸ್ವರ್ದಾಳುಗಳು ಉತ್ತರ ಕನ್ನಡ ಜಿಲ್ಲೆಯ ಯಿಂದ ಭಾಗವಹಿಸಲಿದ್ದು ಸಪ್ಟೆಂಬರ್ ೪ ರಿಂದ ಸಪ್ಟೆಂಬರ್ ೯ರ ತನಕ ನಡೆಯಲಿರುವ ಇಂಟರ್‌ನ್ಯಾಶನ್ ಯೋಗ ಕಾಂಪಿಟೇೆಶನ್‌ನಲ್ಲಿ ಇಂತಹ ಯುವಕರು ಯೋಗದಲ್ಲಿ ಸಾಧನೆ ಮಾಡಿ ಜಿಲ್ಲೆಯನ್ನು ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಮ್ಮ ಜಿಲ್ಲೆಯಿಂದ ರಾಜ್ಯದಿಂದ ಯಾರೆಲ್ಲರೂ ಭಾವಹಿಸುತ್ತಿದ್ದಾರೆ ಅವರೆಲ್ಲರೂ ಶುಭ ಹಾರೈಕೆಗಳು ಎಂದರು.
ಏಷ್ಯಾ ಫೆಸಿಫಿಕ್ ಯೋಗÀ ಸ್ವರ್ದೆಗೆ ಆಯ್ಕೆಯಾದ ನಂದನ ನರಸಿಂಹ ಭಟ್ ಮಾತನಾಡಿ ಮೊದಲು ರಾಜ್ಯ ಮಟ್ಟದಲ್ಲಿ ಯೋಗ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ನಂತರ ಉತ್ತರಖಂಡದಲ್ಲಿ ಏರ್ಪಡಿಸಿದ ರಾಷ್ಟಮಟ್ಟದ ಸ್ವರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಈಗ ಏಷ್ಯಾ ಫೆಸಿಫಿಕ್ ಯೋಗ ಕಾಂಪಿಟೇಶನ್‌ನಲ್ಲಿ ಅಂತರರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದು ಖುಷಿ ಇದೆ. ಸತತ ನಾಲ್ಕು ವರ್ಷದಿಂದ ಯೋಗ ಅಭ್ಯಾಸವನ್ನು ಮಾಡುತ್ತಿದ್ದೇನೆ. ಯೋಗ ಸ್ವರ್ದೆಗಳು ನಡೆದಾಗ ತಂದೆ ತಾಯಿಯವರು ದೂರದ ಊರುಗಳಿಗೆ ಕರೆದುಕೊಂಡು ಹೋಗಿ ತುಂಬಾ ಬೆಂಬಲವಾಗಿದ್ದಾರೆ. ಯೋಗ ಅಭ್ಯಾಸ ಮಾಡಲು ಪ್ರಾರಂಭ ಮಾಡಲು ಪ್ರಾರಂಭಿಸಿದ್ದಾಗಿನಿAದ ಮನಸ್ಸಿನ ಏಕಾಗ್ರತೆ ಜಾಸ್ತಿಯಾಗಿದೆ ಹಾಗೂ ಇದರಿಂದ ಶಿಕ್ಷಣಕ್ಕೆ ನನಗೆ ಪೂರಕವಾಗಿದೆ. ಮುಂದೆ ಬಿ.ಎಸ್.ಸಿ ಯೋಗ ಮಾಡಿ ಅದರೆಲ್ಲೆ ಮುಂದುವರೆಯಬೇಕು ಎನ್ನುವ ಇಚ್ಚೆಯನ್ನು ಹೊಂದಿದ್ದೇನೆ ಎಂದರು.

Leave a Reply

Your email address will not be published. Required fields are marked *