ಯಲ್ಲಾಪುರ: ತಾಲೂಕಿನ ಮಾವಿನಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳನ್ನು ಅಪರಿಚಿತರು ಅಪಹರಿಸಲು ಯತ್ನಿಸಿದ ಆತಂಕಕಾರಿ ಘಟನೆಯೊಂದು ಗುರುವಾರ ನಡೆದಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯ ವಿವರ:
ದಿನಾಂಕ 16.07.2026 ರಂದು ಮಧ್ಯಾಹ್ನ ಸುಮಾರು 4:45 ರ ವೇಳೆಗೆ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ಸಮೀಪದ ಜೋಗಾಳಕೇರಿ ಶಾಲೆಯ ವಿದ್ಯಾರ್ಥಿಗಳು ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಮಲವಳ್ಳಿಯಿಂದ ಬಾರೆಕ್ರಾಸ್ ಬರುವ ರಸ್ತೆಯ ಜೋಗಾಳಕೆರಿ ಊರ ಬಳಿ ಕಾರು ಮತ್ತು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳ ಗುಂಪೊಂದು ವಿದ್ಯಾರ್ಥಿಗಳನ್ನು ತಡೆದು, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಳ್ಳಲು ಯತ್ನಿಸಿದೆ ಎನ್ನಲಾಗಿದೆ.

ಆದರೆ, ಶಾಲಾ ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ಅಪರಿಚಿತರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಓಡಿ ಹೋಗಿ ಹತ್ತಿರದ ಮನೆಯೊಂದರಲ್ಲಿ ಅವಿತುಕೊಂಡು ಅಪಾಯದಿಂದ ಪಾರಾಗಿದ್ದಾರೆ. ನಂತರ ಪರಿಸ್ಥಿತಿ ತಿಳಿಯಾದ ಬಳಿಕ ಸುರಕ್ಷಿತವಾಗಿ ತಮ್ಮ ಮನೆಗಳನ್ನು ತಲುಪಿದ್ದಾರೆ ಎನ್ನಲಾಗಿದೆ.
ಎಚ್ಚರಿಕೆ ಕರೆ:
ಈ ಆಘಾತಕಾರಿ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಹಿತೈಶಿಗಳು ತಾಲೂಕಿನ ಎಲ್ಲಾ ಪಾಲಕರು ಹಾಗೂ ಶಾಲಾ ಶಿಕ್ಷಕರಲ್ಲಿ ತುರ್ತು ವಿನಂತಿ ಮಾಡಿಕೊಂಡಿದ್ದಾರೆ. ಶಾಲಾ ಅವಧಿಯ ನಂತರ ಮಕ್ಕಳು ಮನೆಗೆ ಹೋಗುವಾಗ ಅತ್ಯಂತ ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳ ವಾಹನಗಳನ್ನು ಹತ್ತಬಾರದು, ಚಾಕೊಲೇಟ್ ಅಥವಾ ಯಾವುದೇ ವಸ್ತುಗಳನ್ನು ಆಮಿಷ ಒಡ್ಡಿದರೂ ಸ್ವೀಕರಿಸಬಾರದು ಎಂದು ಮಕ್ಕಳಿಗೆ ಕಡ್ಡಾಯವಾಗಿ ತಿಳಿಹೇಳಬೇಕು ಎಂದು ವಿನಂತಿಸಲಾಗಿದೆ.
ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಶಾಲಾ ಪರಿಸರದಲ್ಲಿ ಅಪರಿಚಿತರ ಚಲನವಲನಗಳ ಮೇಲೆ ನಿಗಾ ಇಡಲು ಬಾರೆಕ್ರಾಸ್ ನಲ್ಲಿ ಸಿಸಿಟಿವಿ ಅಳವಡಿಸಬೇಕು. ಅಪರಿಚಿತ ಮಾಹನಗಳ ಬಗ್ಗೆ ನಿಗಾವಹಿಸಿ ಸಾರ್ವಜನಿಕರು ಸದಾ ಜಾಗೃತರಾಗಿರಲು ಕೋರಲಾಗಿದೆ.
ಪ್ರವಾಸಿಗರ ಕೀಟಲೆಯಾ ಇದು???
ಇನ್ನು ಈ ಅಪಹರಣದ ಮಾಹಿತಿಯನ್ನು ಗಮನಿಸಿದರೆ ಸ್ಥಳಿಯ ಪ್ರವಾಸಿ ತಾಣಗಳಿಗೆ ಬಂದಿದ್ದ ಕೆಲ ಪ್ರವಾಸಿಗರು ವಾಪಸ್ ತೆರಳುವಾಗ ಮಕ್ಕಳನ್ನು ಕಂಡು ಕೀಟಲೆ ಮಾಡಲು ಹೋಗಿ ಇಂತ ಘಟನೆ ನಡೆದಿದೆಯಾ ಎಂಬ ಅನುಮಾನವೂ ಹಲವರನ್ನು ಕಾಡುತ್ತಿದೆ. ಕಾರಣ ಇದುವರೆಗೂ ಈ ಭಾಗದಲ್ಲಿ ಯಾವುದೇ ಇಂತಹ ಘಟನೆಗಳು ನಡೆದಿಲ್ಲ. ಹಾಗೂ ತಾಲೂಕಿನ ದೂರದ ಭಾಗವಾದ ಈ ಹಳ್ಳಿಗೆ ಬಂದರೆ ಹೊರಬಿಳಲು 15-30 ಕಿಲೊಮೀಟರ್ ಕ್ರಮಿಸಬೇಕು ಮತ್ತು ಕ್ರಮಿಸಲು ಸುಮಾರು ಅರ್ಧ ಒಂದು ಗಂಟೆಗಳೆ ಬೇಕು ಎನ್ನುವುದು ಕೆಲವರ ವಾದವಾಗಿದೆ. ಏನೆ ಆದರು ಶಾಲಾ ಮಕ್ಕಳೊಂದಿಗೆ ನಡೆದ ಘಟನೆ ಸರಿಯಾದದ್ದಲ್ಲ. ಅಂತವರಿಗೆ ಸಂಭಂದಿಸಿದ ಇಲಾಖೆ ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
———————————————————————-
ಯಾವ ಗ್ರಾಮಸ್ಥರು ಭಯ ಪಡುವ ಅಗತ್ಯವಿಲ್ಲ. ಇಂತಹ ಕೀಟಲೆಗಳಿಗಳನ್ನು ಗ್ರಾಮಸ್ಥರು ಓಟ್ಟಾಗಿ ಎದುರಿಸೋಣ. ಪಾಲಕರು ಮಕ್ಕಳಿಗೆ ಧೈರ್ಯ ತುಂಬಿ ಶಾಲೆಗಳಿಗೆ ಕಳುಹಿಸಿಕೊಡಿ
ಸುಬ್ಬಣ್ಣ ಕುಂಟೆಗಾಳಿ ( ಮಾಜಿ ಅಧ್ಯಕ್ಷರು ಗ್ರಾಂ . ಪಂ . ಮಾವಿನಮನೆ
——————————————————————-
ಇಂತಹ ಸಮಯದಲ್ಲಿ ಮಕ್ಕಳು ಧೃತಿಗೆಡಬಾರದು. ತಕ್ಷಣ ಹತ್ತಿರ ಇರುವ ಸ್ಥಳಿಯರ ಗಮನಕ್ಕೆ ತನ್ನಿ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇಂತಹ ಪರಿಸ್ಥಿತಿಯನ್ನು ಗ್ರಾಮಸ್ಥರು ಓಟ್ಟಾಗಿ ಎದುರಿಸಿ ನಿಲ್ಲೋಣ
ಸುಬ್ಬಣ್ಣ ಬೊಳ್ಮನೆ (ಅಧ್ಯಕ್ಷರು ಮಾವಿನಮನೆ ಸೇವಾ ಸಹಕಾರಿ ಸಂಘ)
———————————————————————
ಅಪರಿಚಿತರು ಯಾವತ್ತು ಮಕ್ಕಳೊಂದಿಗೆ ಇಂತಹ ಕೆಲಸ ಮಾಡಬಾರದು. ಇದು ಗ್ರಾಮಸ್ಥರನ್ನು ಭಯದಲ್ಲಿ ದೂಡುವಂತೆ ಮಾಡಿದೆ.
ರಾಘವೇಂದ್ರ ಭಟ್ ತಂಗಜ್ಜಿ ಮನೆ ( ಸ್ಥಳಿಯರು)





Leave a Reply