ಬೆಂಗಳೂರು: ರಾಜ್ಯದಲ್ಲಿನ ಅನಾವೃಷ್ಟಿ ಹಾಗೂ ನೆರೆ ರಾಜ್ಯಗಳ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ (Vegetable) ಬೆಲೆ ಗಗನಕ್ಕೇರಿದ್ದು, ಸಾರ್ವಜನಿಕರ ಕಿಚನ್ ಬಜೆಟ್ ಸಂಪೂರ್ಣವಾಗಿ ಹಳಿ ತಪ್ಪಿದೆ. ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ನಿತ್ಯ ಬಳಕೆಯ ತರಕಾರಿಗಳ ದರ ಸಾಮಾನ್ಯ ಜನರ ಕೈಗೆಟುಕದಂತಾಗಿದೆ.
ತರಕಾರಿ ಮತ್ತು ಮೊಟ್ಟೆ ದರ ಪಟ್ಟಿ:

-
ನುಗ್ಗೆಕಾಯಿ & ಬೆಳ್ಳುಳ್ಳಿ: ಪ್ರತಿ ಕೆಜಿಗೆ 200 ರಿಂದ 220 ರೂ.
-
ಬೀನ್ಸ್: ಪ್ರತಿ ಕೆಜಿಗೆ 140 ರೂ. ದಾಟಿದೆ.
-
ಬಿಳಿ ಬದನೆಕಾಯಿ: ಇತಿಹಾಸದಲ್ಲೇ ಮೊದಲ ಬಾರಿಗೆ 100 ರೂ. ಗಡಿ ದಾಟಿದೆ.
-
ಕೋಳಿ ಮೊಟ್ಟೆ: ಪ್ರತಿ ಮೊಟ್ಟೆಯ ಬೆಲೆ 6.50 ರೂ. ನಿಂದ 8 ರೂಪಾಯಿಗೆ ಏರಿಕೆಯಾಗಿದೆ.
-
ಟೊಮೆಟೊ & ಈರುಳ್ಳಿ: ಟೊಮೆಟೊ (15-20 ರೂ.) ಹಾಗೂ ಈರುಳ್ಳಿ (20-25 ರೂ.) ದರ ಮಾತ್ರ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಗ್ರಾಹಕರಿಗೆ ತುಸು ನೆಮ್ಮದಿ ನೀಡಿದೆ.
ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕೆಜಿಗಟ್ಟಲೆ ತರಕಾರಿ ಕೊಳ್ಳುವುದನ್ನು ಬಿಟ್ಟು ಕಾಲು ಕೆಜಿಗೆ ಸೀಮಿತವಾಗಿದ್ದಾರೆ. ಇದರಿಂದ ವ್ಯಾಪಾರವಿಲ್ಲದೆ ವರ್ತಕರು ಕೂಡ ಕಂಗಾಲಾಗಿದ್ದು, ಹಸಿಮೆಣಸಿನಕಾಯಿ ಹಾಗೂ ಮೆಂತ್ಯ ಸೊಪ್ಪಿನ ದರವೂ ಭಾರಿ ದುಬಾರಿಯಾಗಿದೆ.




Leave a Reply