
ಯಲ್ಲಾಪುರ: ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಮ್ಮೆ ಜನರ ತೀರ್ಪು ಪಡೆಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದ್ದಾರೆ.
ಯಲ್ಲಾಪುರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಹೆಬ್ಬಾರ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಆದರೆ ಈಗ ನಾನು ಪ್ರೀ ಬರ್ಡ್ ಎಂದು ಹೇಳುತ್ತ ತಿರುಗಬಹುದಷ್ಟೆ. ಆದರೆ ಅದು ಸಾಧ್ಯವಿಲ್ಲ. ಒಂದು ವೇಳೆ ಪ್ರೀ ಬರ್ಡ್ ಆಗುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುಣಾವಣೆಗೆ ಬಂದರೆ ಮಾತ್ರ ಸಾಧ್ಯ . ಕಾಂಗ್ರೇಸ್ ನಿಂದ ಬಿಜೆಪಿಗೆ ಬಂದು ಉಪ ಚುಣಾವಣೆಯಲ್ಲಿ ಪ್ರಚಂಡ ವಿಜಯವನ್ನು ಅವರಿಗೆ ನೀಡಿದ್ದು ಬಿಜೆಪಿ ಕಾರ್ಯಕರ್ತರು . ಹಿಂದಿನ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಇವರು , ಸಚಿವರಾದ ನಂತರ ಕೆಲವು ವಿವಾದದಿಂದಲೆ ಕಳೆದ ಚುಣಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದಾರೆ. ಆ ಸಯಮದಲ್ಲೂ ಅವರ ಬೆನ್ನ ಹಿಂದೆ ನಿಂತು ಗೆಲ್ಲಿಸಿದ್ದು ಇದೆ ಬಿ ಜೆ ಪಿ ಕಾರ್ಯಕರ್ತರೆ . ಆದರೆ ವಿಜಯೋತ್ಸವದ ಸಮಯದಲ್ಲಿ ಅವರು ಮಾತನಾಡಿದ ವಿಚಾರ ಬಿಜೆಪಿ ಕಾರ್ಯಕರ್ತರು ಯಾವತ್ತು ಮರೆಯುದಿಲ್ಲ . ಪಕ್ಷದ ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವರೆಲ್ಲರನ್ನು ಒಗ್ಗೂಡಿಸಿ ತೆಗೆದುಕೊಂಡು ಹೋಗುವುದು ನಿಜವಾದ ನಾಯಕನ ಕರ್ತವ್ಯ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ ಶಾಸಕ ಹೆಬ್ಬಾರ್ ಅವರು ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದ್ದು , ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷದೊಂದಿಗೆ ಅವರು ಗುರುತಿಸಿಕೊಳ್ಳುತ್ತಾರೆ. ಕಾರ್ಯಕರ್ತರು ನಂಬಿ ಇವರಿಗೆ ಮತ ಚಲಾವಣೆ ಮಾಡಿದರೆ ಇವರಿಗೆ ಬೇಕಾದಾಗ ಪಕ್ಷ ಬದಲಾವಣೆ ಮಾಡುತ್ತಾರೆ. ಇನ್ನು ಗ್ರಾಮ ಪಂಚಾಯತ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು , ಸರ್ಕಾರದ ಬಳಿ ಹಣ ಇಲ್ಲ. ಗ್ರಾಮೀಣ ಭಾಗದ ಜನರ ಕಷ್ಟವನ್ನು ಅರಿತು ಅವರ ಸಹಾಯಕ್ಕೆ ಬರಬೇಕಿತ್ತು . ಆದರೆ ಶಾಸಕರ ವರ್ತನೆ ಮಾತ್ರ ತನಗೆ ಎಲ್ಲಿ ವಯಕ್ತಿಕ ಲಾಭ ಸಿಗುತ್ತೊ ಅಲ್ಲಿ ಗುರುತಿಸಿ ಕೊಳ್ಳುತ್ತಾರೆ. ಪಂಚಾಯತ ವ್ಯಾಪ್ತಿಯಲ್ಲಿ ಅತಿಕ್ರಮಣದ ಮನೆ ಕರ ಸರ್ಕಾರ ತೆಗೆದುಕೊಳ್ಳದಂತೆ ನಿರ್ಧಾರ ಕೈಗೊಂಡಾಗ 75 % ಇವರ ಮತದಾರರೆ ಅತಂತ್ರ ವಾಗುವ ಸಮಯದಲ್ಲೂ ಶಾಸಕರು ಆದೇಶದ ವಿರುದ್ಧ ಯಾವ ಪ್ರತಿರೋಧವನ್ನು ಕಾಣಿಸಿಲ್ಲ . ಬಿಜೆಪಿ ಜನರ ಪರವಾಗಿ ಪ್ರತಿಭಟನೆ ಮಾಡಲು ಪ್ರಾರಂಭಿಸಿದಾಗ ಇವರ ಪ್ರಚಾರದ ಹೋರಾಟ ಪ್ರಾರಂಭವಾಗಿದೆ. ಅಷ್ಟಿದ್ದಲ್ಲಿ ಸರ್ಕಾರ ಆದೇಶ ಮಾಡಿದ ತಕ್ಷಣ ರಾಜೀನಾಮೆ ನೀಡ ಹೋರಾಟ ಮಾಡಬೇಕಿತ್ತು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಉಮೇಶ ಭಾಗ್ವತ್, ರಾಘವೇಂದ್ರ ಭಟ್ , ಗಣೇಶ ಪಾಟಣಕರ್ , ಮಹಾಬಲೇಶ್ವರ ಭಟ್ , ಜಿ ಆರ್ ಭಾಗ್ವತ್ , ಶ್ರೀಕಾಂತ ಹೆಬ್ಬಾರ್ ಮುಂತಾದವರಿದ್ದರು.















Leave a Reply